Ad imageAd image

ಪ್ಯಾಸ್ ಫೌಂಡೇಶನ್ ನಿಸ್ವಾರ್ಥ ಸೇವೆ ಶ್ಲಾಘನೀಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Bharath Vaibhav
ಪ್ಯಾಸ್ ಫೌಂಡೇಶನ್ ನಿಸ್ವಾರ್ಥ ಸೇವೆ ಶ್ಲಾಘನೀಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now

ಪ್ಯಾಸ್ ಫೌಂಡೇಶನ್ ಪುನರುಜ್ಜೀವನಗೊಳಿಸಿದ ಗಜಪತಿ ಗ್ರಾಮದ ಕೆರೆ ಹಸ್ತಾಂತರ ಕಾರ್ಯಕ್ರಮ

ಬೆಳಗಾವಿ : ಪ್ಯಾಸ್ ಫೌಂಡೇಶನ್ ಕಳೆದ 8- 9 ವರ್ಷಗಳಿಂದ ಉತ್ತಮವಾಗಿ ಕೆಲಸ ಮಾಡುತ್ತಿದೆ. ನೀರಿನ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿರುವುದು ದೇವರ ಕೆಲಸಕ್ಕೆ ಸಮನಾದುದು. ಸ್ವಾರ್ಥರಹಿತವಾಗಿ ಪ್ಯಾಸ್ ಫೌಂಡೇಶನ್ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಗಜಪತಿಯಲ್ಲಿ ಬುಧವಾರ ಪ್ಯಾಸ್ ಫೌಂಡೇಶನ್ ಅಭಿವೃದ್ಧಿಪಡಿಸಿದ ಕೆರೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.

 

ರಾಜಕಾರಣಿಗಳು ನಿರೀಕ್ಷೆಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತೇವೆ. ಆದರೆ ನಿಸ್ವಾರ್ಥವಾಗಿ ಕೆಲಸ ಮಾಡುವುದು ದೇವರ ಕೆಲಸ ಮಾಡಿದಂತೆ. ಅಂತಹ ಪ್ಯಾಸ್ ಫೌಂಡೇಶನ್ ಕೆಲಸ ಇನ್ನಷ್ಟು ದೊಡ್ಡದಾಗಿ ಮುಂದುವರಿಯಲಿ ಎಂದು ಸಚಿವರು ಹೇಳಿದರು.

ಈ ಭಾಗದಲ್ಲಿ ಮೊದಲು ಕೆರೆ ತುಂಬುವ ಯೋಜನೆಯ ಪರಿಕಲ್ಪನೆಯೇ ಇರಲಿಲ್ಲ. ಕೆರೆ ತುಂಬುವ ಯೋಜನೆ ಎಂದರೇನೆಂದೇ ಈ ಭಾಗದ ಜನರಿಗೆ ಗೊತ್ತಿರಲಿಲ್ಲ. ಕೇವಲ ದಕ್ಷಿಣಕರ್ನಾಟಕ ಭಾಗದವರು ಯೋಜನೆ ತೆಗೆದುಕೊಂಡು ಹೋಗುತ್ತಿದ್ದರು. ನಾನು ಶಾಸಕಿಯಾದ ತಕ್ಷಣ ಕೆರೆ ತುಂಬುವ ಯೋಜನೆ ಕೈಗೆತ್ತಿಕೊಂಡಿದ್ದೇನೆ. ನಮ್ಮ ಗ್ರಾಮೀಣ ಕ್ಷೇತ್ರಕ್ಕೆ ಕೆರೆ ತುಂಬುವ ಯೋಜನೆಗೆ ಸುಮಾರು 900 ಕೋಟಿ ರೂ. ಅನುದಾನ ತಂದಿದ್ದೇನೆ ಎಂದು ಹೆಬ್ಬಾಳಕರ್ ಹೇಳಿದರು.

ಭೂಮಿಯಲ್ಲಿ ಶೇ.70ಷ್ಟು ನೀರಿದ್ದರೂ ಬಳಸಬಹುದಾದ ನೀರಿನ ಪ್ರಮಾಣ ಕೇವಲ ಶೇ.3ರಷ್ಟು ಮಾತ್ರ. ಹಾಗಾಗಿ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ದಿಸೆಯಲ್ಲಿ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಜಲಮೂಲಗಳನ್ನು ರಕ್ಷಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಚಿವರು ವಿನಂತಿಸಿದರು.

ಜಿನಾಬಕುಲ್ ಫೋರ್ಜ್ ಪ್ರೈವೇಟ್ ಲಿಮಿಟೆಡ್ ನ ಆರ್ಥಿಕ ಸಹಕಾರದೊಂದಿಗೆ ಪ್ಯಾಸ್ ಫೌಂಡೇಷನ್ ವತಿಯಿಂದ ಪುನರುಜ್ಜೀವನಗೊಳಿಸಿದ ಕೆರೆಯನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲಾಯಿತು.

ಈ ವೇಳೆ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಪ್ಯಾಸ್ ಪೌಂಡೇಷನ್ ಅಧ್ಯಕ್ಷರಾದ ಡಾ.ಮಾಧವ್ ಪ್ರಭು, ಉಪಾಧ್ಯಕ್ಷರಾದ ಅಭಿಮನ್ಯು ಡಾಗಾ, ಕಾರ್ಯದರ್ಶಿ ಪ್ರೀತಿ ಕೋರೆ, ಸದಸ್ಯರಾದ ಸೂರ್ಯಕಾಂತ ಹಿಂಡಾಲ್ಗೆಕರ್, ಅವಧೂತ ಸಾಮಂತ, ದೀಪಕ್ ಓವುಳಕರ್, ಸತೀಶ ಲಾಡ್, ರೋಹನ ಕುಲಕರ್ಣಿ, ಲಕ್ಷ್ಮೀಕಾಂತ ಪಸಾರೆ, ರಮೇಶ ಪಾಟೀಲ, ಜಿನಾಬಕುಲ್ ಫೋರ್ಜ್ ನ ಬಾಳು ಬದನ್, ಕಿರಣ ಜಿನಗೌಡ, ಸಂತೋಷ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ, ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶೋಭಾ ಕುರುಬರ್, ಉಪಾಧ್ಯಕ್ಷರಾದ ಸುನಿಲ್ ದಳವಾಯಿ, ಸದಸ್ಯರಾದ ಸಂತೋಷ ಬಂದವ್ವಗೋಳ, ಭೀಮಪ್ಪ ಪೂಜೇರ್, ಮಲ್ಲವ್ವ ಕೋಲಕಾರ, ಮಹಾದೇವಿ ಕೋಲಕಾರ, ಇನಾಯತ್ ಅಲಿ ಅತ್ತಾರ್, ಮೌಲಾ ಅಲಿ ಯಕ್ಕುಂಡಿ, ಅಶ್ವಿನಿ ಕೆಮಜಿ, ಗಂಗಪ್ಪ ಮುನವಳ್ಳಿ, ಹನಮಂತ ಶೀಗಿಹಳ್ಳಿ, ರಾಜು ಅಲಹಾಬಾದಿ, ಬಸವರಾಜ ಕಲಾರಕೊಪ್ಪ, ಶಿವಾಜಿ ಕೆಮಜಿ, ಗ್ರಾಮದ ಹಿರಿಯರಾದ ರಮೇಶಗೌಡ ಪಾಟೀಲ, ಕಲ್ಲಯ್ಯ ಹಿರೇಮಠ್, ನಾಗರಾಜ ಲಂಗೂಟಿ, ಬಸಪ್ಪ ಪ್ರದಾನಿ, ರಾಮಪ್ಪ ಲಂಗೂಟಿ, ಬಸಪ್ಪ ಬಂದವ್ವಗೋಳ, ಶ್ರೀಕಾಂತ ಲಂಗೂಟಿ, ಸುರೇಶ ಪ್ರದಾನಿ, ಅಶೋಕ್ ಪ್ರದಾನಿ, ಲಕ್ಷ್ಮಣ ಪಾಟೀಲ, ಬಾಬು ಪಾಟೀಲ, ದುರ್ಗಪ್ಪ ಕೋಲಕಾರ, ರಾಜೇಂದ್ರ ಕೋಲಕಾರ, ಮಲ್ಲಪ್ಪ ವಾಲಿ ಮುಂತಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!