Ad imageAd image

ಸಮಾಜಕ್ಕೆ ಬಸವಣ್ಣನ ಕೊಡುಗೆ ಅಪಾರ:ಬಸವಲಿಂಗ ಪಟ್ಟದೇವರು

Bharath Vaibhav
ಸಮಾಜಕ್ಕೆ ಬಸವಣ್ಣನ ಕೊಡುಗೆ ಅಪಾರ:ಬಸವಲಿಂಗ ಪಟ್ಟದೇವರು
WhatsApp Group Join Now
Telegram Group Join Now

ಚಿಟಗುಪ್ಪ:ಮಾನವ ಸಮಾಜಕ್ಕೆ ಬಸವಣ್ಣನವರ ಕೊಡುಗೆ ಅಪಾರ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದೇವರು ಹೇಳಿದರು.

ತಾಲ್ಲೂಕಿನ ಕಂದಗೂಳ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಸವಣ್ಣನವರ ಅಶ್ವರೂಢ ಮೂರ್ತಿ ಅನಾವರಣ ಹಾಗೂ ಬಸವ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ದರು.

ಬಸವಣ್ಣನವರು ಸಾಮಾಜಿಕ ನ್ಯಾಯದ ಮೇಲೆ ಸರ್ವ ಜನಾಂಗದ ಶಾಂತಿಗೆ ಶ್ರಮಿಸಿದ ಮಹಾನ ಮಾನವತವಾದಿಗಳು.ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ವಚನಗಳ ಮೂಲಕ ತಿದ್ದಿ ಸಮ ಸಮಾಜ ನಿರ್ಮಾಣ ಮಾಡಲು ಪ್ರಯತ್ನ ಮಾಡಿದರು.ಕಾಯಕದಲ್ಲಿ ಶಿವನನ್ನು ಕಂಡು ಎಲ್ಲರ ಲೆಸನ್ನ ಬಯಸಿದರು.
ಬಸವಣ್ಣನವರ ಚಿಂತನೆಗಳು ಹರಡಬೇಕು.ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು.ಬಸವಣ್ಣನ ಮೂರ್ತಿಯಿಂದ ಆದರ್ಶಗಳು ಮೈಗೂಡಿಸಿಕೊಳ್ಳಬೇಕು.ಶರಣ ಸಂಘ ಮಾಡಬೇಕು.ನಿತ್ಯ ಕನಿಷ್ಠ ವಚನಗಳಾದರೂ ಪಠಿಸಬೇಕು.ಅವರ ಆದರ್ಶಗಳು ಅಳವಡಿಸಿಕೊಂಡು ಮುಂದಿನ ಜನಾಂಗಕ್ಕೆ ಕೊಂಡಯ್ಯಬೇಕೆಂದು ತಿಳಿಸಿದರು.

ಬಸವಕಲ್ಯಾಣ ಮಹಾಮನೆ ಗುಣತೀರ್ಥವಾಡಿ ಪೀಠಾಧ್ಯಕ್ಷ ಬಸವಪ್ರಭು ಸ್ವಾಮಿ ಮಾತನಾಡಿ,ಬಸವಣ್ಣ ಮೂರ್ತಿ ಸ್ಥಾಪನೆ ಮಾಡಿದರೆ ಸಾಲದು,ಮೂರ್ತಿ ನೋಡುವ ಮೂಲಕ ಜೀವನ ಬದಲಾವಣೆಯಾಗಬೇಕು.ಬಸವಣ್ಣನವರ ತತ್ವಗಳು ಅಳವಡಿಕೆಯಾಗಬೇಕು ಆಗ ಮಾತ್ರ ಎಲ್ಲಡೆ ಬಸವಣ್ಣರ ಚಿಂತನೆಗಳು ಪಸರಿಸಲು ಸಾಧ್ಯವಾಗುತ್ತದೆ.ಮೌಢ್ಯಗಳನ್ನ ಹೋಗಲಾಡಿಸಬೇಕು.ಬಸವಣ್ಣನವರ ಕಲ್ಪನೆ ಕೂಡ ಅದೇ ಆಗಿತ್ತು ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ.ಮಹಾದೇವಮ್ಮ ತಾಯಿ,ಮೈತ್ರಾದೇವಿ ತಾಯಿ,ರಾಚಪ್ಪ ಮಾಲಿ ಪಾಟೀಲ,ಸಂಗಮೇಶ ಜವಾದಿ,ಸಿದ್ದಲಿಂಗ ಸ್ವಾಮಿ,ಪ್ರಮುಖರಾದ ರಾಜಶೇಖರ್ ಪಾಟೀಲ,ಬಂಡೆಪ್ಪ ಮೂಲಗಿ, ಮಾಣಿಕರಾವ ಹೌವಶೆಟ್ಟಿ,ಶಂಕ್ರಪ್ಪ ಶೇರಿ,ಅಣೆಪ್ಪ ನಾಗನಕೇರ,ಬಸವರಾಜ ಪೊಲೀಸ ಪಾಟೀಲ ಸೇರಿ ಅನೇಕರು ಇದ್ದರು.

ವರದಿ :ಸಜೀಶ ಲಂಬುನೋರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!