ಸೆಲಿಬ್ರೆಟಿ ಜೋಡಿಗಳಲ್ಲಿ ಒಂದಾದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕ್ರಮವಾಗಿ ಕ್ರಿಕೆಟ್ ಹಾಗೂ ಸಿನೇಮಾ ಕ್ಷೇತ್ರಗಳಿಂದ ಪ್ರಸಿದ್ದಿ ಪಡೆದವರು. ಅವರು ಈಗ ತಮ್ಮ ಕ್ಷೇತ್ರಗಳಲ್ಲಿ ಸಾಧನೆಯ ಹೆಸರು ಮಾಡಿದ್ದಾರಲ್ಲದೇ ಸಾವಿರಾರು ಕೋಟಿ ರೂಗಳ ಒಡೆಯರೂ ಆಗಿದ್ದು, ದೇಶ, ವಿದೇಶಗಳಲ್ಲಿ ಐಷಾರಾಮಿ ಬಂಗಲೆಗಳನ್ನು ಹೊಂದಿದ್ದಾರೆ.

ಅನುಷ್ಕಾ ಶರ್ಮಾ ಸಿನೇಮಾ ಹಾಗೂ ಜಾಹೀರಾತು ರಂಗದಿಂದ ದುಡ್ಡು ಮಾಡಿದ್ದರೆ, ವಿರಾಟ್ ಕೊಹ್ಲಿ ಕ್ರಿಕೆಟ್, ಜಾಹೀರಾತು ಹಾಗೂ ಐಪಿಎಲ್ ಕ್ರಿಕೆಟ್ ನಿಂದ ಸಾಕಷ್ಟು ದುಡ್ಡು ಮಾಡಿದ್ದಾರೆ. ಈಗ ಲಂಡನ್ ನಲ್ಲಿಯೂ ಐಷಾರಾಮಿ ಬಂಗಲೆ ಹೊಂದಿರುವ ಅನುಷ್ಕಾ ಶರ್ಮಾ, ಎರಡು ಮಗುವಿನ ನಂತರ ಲಂಡನ್ ನಲ್ಲಿ ನೆಲೆಸುವ ಇರಾದೆಯನ್ನು ಹೊಂದಿರುವ ಬಗ್ಗೆ ಮಾಹಿತಿಗಳು ಬರುತ್ತಿವೆ.

ವಿರಾಟ್ ಕೊಹ್ಲಿ ಕ್ರಿಕೆಟ್ ನಲ್ಲಿ ನಿರಂತರ ಉತ್ತಮ ಪ್ರದರ್ಶನ ನೀಡುತ್ತ ಹಾಗೂ ಅನುಷ್ಕಾ ಬಾಲಿವುಡ್ ನಲ್ಲಿ ಬೇಡಿಕೆಯ ನಟಿಯಾಗಿ ದುಡ್ಡು ಮಾಡಿದ್ದಾರೆ. ಈ ಇಬ್ಬರು ಒಟ್ಟು 1300 ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಅನುಷ್ಕಾ ಶರ್ಮಾ ಸುಮಾರು 400 ಕೋಟಿ ಆಸ್ತಿಯನ್ನು ಸಿನೇಮಾ ರಂಗದಿಂದ ಸಂಪಾದಿಸಿದ್ದಾರೆ. ವಿರಾಟ್ ಕೊಹ್ಲಿಗೆ ಬಿಸಿಸಿಐ ಸೆಂಟ್ರಲ್ ಕಾಂಟ್ರಾಕ್ಟನಿಂದ ವಾರ್ಷಿಕ 7 ಕೋಟಿ ಪಡೆಯುತ್ತಾರೆ. ಹಾಗೇ ಐಪಿಎಲ್ ಸಂಪಾದನೆ, ಜಾಹೀರಾತು ಸಂಪಾದನೆ ಕೂಡ ಇದೆ.




