Ad imageAd image

ಸುಸ್ತಾಗಿ ರಸ್ತೆ ಮಧ್ಯೆ ಕುಸಿದ ಕುದುರೆ

Bharath Vaibhav
ಸುಸ್ತಾಗಿ ರಸ್ತೆ ಮಧ್ಯೆ ಕುಸಿದ ಕುದುರೆ
WhatsApp Group Join Now
Telegram Group Join Now

ಕೋಲ್ಕತ್ತಾದಲ್ಲಿ ಬಿಸಿಲಿನಿಂದ ಕುಸಿದು ಬಿದ್ದ ಕುದುರೆಗೆ ಮಾಲೀಕ ಥಳಿಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೇಟಾ ಇಂಡಿಯಾ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿ ಕುದುರೆಯನ್ನು ಆಶ್ರಯತಾಣಕ್ಕೆ ಕಳುಹಿಸಿದ್ದಾರೆ.

ಕೋಲ್ಕತ್ತಾ: ವಿಪರೀತ ಬಿಸಿಲು ಹಾಗೂ ಸುಸ್ತಿನಿಂದಾಗಿ ಕುದುರೆಯೊಂದು ರಸ್ತೆಯಲ್ಲಿ ಸಾಗುತ್ತಿದ್ದಾಗಲೇ ರಸ್ತೆ ಮಧ್ಯೆ ಕುಸಿದು ಬಿದ್ದಂತಹ ಘಟನೆ ನಡೆದಿದೆ. ಆದರೆ ಅದರ ಮಾಲೀಕ ಈ ಸಮಯದಲ್ಲಿ ಅದಕ್ಕೆ ನೀರು ಕೊಟ್ಟು ಸಹಾಯಕ್ಕೆ ಧಾವಿಸುವ ಬದಲು ಅದನ್ನು ಮೇಲೆಳಿಸುವುದಕ್ಕೆ ಥಳಿಸಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅನೇಕರು ಮಾಲೀಕನ ಕ್ರೌರ್ಯಕ್ಕೆ ಅಸಮಾಧಾನ ವ್ಯಕ್ಯಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಈ ಘಟನೆ ನಡೆದಿದೆ.

ಪೇಟಾ ಇಂಡಿಯಾ ಏಪ್ರಿಲ್ 29ರಂದು ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಕೋಲ್ಕತ್ತಾದಲ್ಲಿ ನಿರ್ಜಲೀಕರಣಗೊಂಡು ಕೃಶವಾಗಿದ್ದ ಕುದುರೆಯೊಂದು ಬಿಸಿಲಿನ ಹೊಡೆತಕ್ಕೆ ತುತ್ತಾಗಿ ಕುಸಿದು ಬಿತ್ತು. ತೀವ್ರವಾಗಿ ಕಡಿಮೆ ತೂಕ, ನಿರ್ಜಲೀಕರಣ ಮತ್ತು ನೋವಿನಿಂದ ಬಳಲುತ್ತಿರುವ ಕುದುರೆಗಳು ಪ್ರವಾಸಿಗರ ಆಕರ್ಷಣೆಯಾಗಬಾರದು ಎಂದು ಬರೆದು ಕೋಲ್ಕತ್ತಾ ಪೊಲೀಸರು, ಮಮತಾ ಬ್ಯಾನರ್ಜಿ, ಸೇರಿದಂತೆ ಹಲವರಿಗೆ ಟ್ಯಾಗ್ ಮಾಡಿದ್ದು, ದಯವಿಟ್ಟು ಕುದುರೆಯನ್ನು ಆಶ್ರಯತಾಣಕ್ಕೆ ಕಳುಹಿಸಿ ಮತ್ತು ಕ್ರೂರ ಕುದುರೆ ಎಳೆಯುವ ಬಂಡಿಗಳನ್ನು ಇ-ವಾಹನಗಳಾಗಿ ಬದಲಾಯಿಸಿ ಎಂದು ಮನವಿ ಮಾಡಿದ್ದರು. ಈ ವೀಡಿಯೋ ಸಾಕಷ್ಟು ವೈರಲ್ ಆಗಿ ಜನ ಇದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಇದಾದ ನಂತರ ಕೋಲ್ಕತ್ತಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಎಫ್‌ಐಆರ್ ದಾಖಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಪೂಜಾ ಹೆಗ್ಡೆ ಕೂಡ ಕಳವಳ ವ್ಯಕ್ತಪಡಿಸಿ ಟ್ವಿಟ್ ಮಾಡಿದ್ದಾರೆ. ಸುಸ್ತು ಹಾಗೂ ಬಿಸಿಲಾಘಾತ ತಾಳಲಾರದೇ ಬಿದ್ದ ಕುದುರೆಯನ್ನು ಮತ್ತೆ ಮೇಲೇದು ಸಾಗುವಂತೆ ಒತ್ತಾಯಿಸಲಾಯಿತು. ಇಂತಹ ಕ್ರೌರ್ಯವನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿದ ಅವರು ಪಶ್ಚಿಮ ಬಂಗಾಳ ಸಿಎಂ ಹಾಗೂ ಕೋಲ್ಕತ್ತಾ ಪೊಲೀಸರಿಗೆ ಆಗ್ರಹಿಸಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಕ್ರೌರ್ಯ, ಇವರು ಈ ಕುದುರೆಗೆ ಆಹಾರವನ್ನಾದರೂ ನೀಡುತ್ತಾರೋ ಇಲ್ಲವೋ ಎಂದು ಪ್ರಶ್ನಿಸಿದ್ದಾರೆ. ಇಂತಹವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಕೋಲ್ಕತ್ತಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 24-4-2025ರಂದು ಭವಾನಿಪುರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ. ಪೇಟಾ ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ ಅಡಿ ಪ್ರಕರಣ ದಾಖಲಾಗಿದೆ. ಆರೋಪಿಯವ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಈ ಕುದುರೆಯನ್ನು ದಿನವೂ ತಪಾಸಣೆ ಇರುವ ಪ್ರಾಣಿಗಳ ಆಶ್ರಯ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಆರೋಗ್ಯವಾಗಿದೆ. ಈ ಬಗ್ಗೆ ಗಮನ ಸೆಳೆದ ಎಲ್ಲರಿಗೂ ಧನ್ಯವಾದಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಕ್ರಮಕ್ಕೆ ಈಗ ಪೇಟಾ ಇಂಡಿಯಾ ಧನ್ಯವಾದ ಹೇಳಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!