ಬೆಂಗಳೂರು: ಯಶವಂತಪುರ ದಲ್ಲಿರುವ ಕಲಾ೯ನ್ ಎಂಟರ್ಪ್ರೈಸಸ್ ಲಿಮಿಟೆಡ್ ಮಾಲೀಕ ಸುಧಾಕರ್ ಪೈ ಅವರ ಕಂಪನಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಜನರು 35 ವರ್ಷದಿಂದ 40 ವರ್ಷ ತನಕ ಕೆಲಸ ಮಾಡುತ್ತಿದ್ದು ಅವರಿಗೆ ನೋಟಿಸ್ ನೀಡದೆ ಮರುದಿನವೇ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದು ಕಾರ್ಮಿಕರ ಕಾನೂನು ಅಡಿಯಲ್ಲಿ ನಮಗೆ ಅನ್ಯಾಯ ಮಾಡಿರುತ್ತಾರೆ ಎಂದು ಕಾರ್ಮಿಕ ಮುಖಂಡ ಗಂಗರಾಜು ಆರೋಪಿಸಿದ್ದಾರೆ.

ನಮಗೆ ಕೆಲಸದಿಂದ ತೆಗೆದು ಹಾಕುಲು ಕಾರ್ಮಿಕರ ಕಾನೂನು ಪ್ರಕಾರ 3 ತಿಂಗಳ ಮುಂಚ್ಚೆ ನೋಟಿಸ್ ನೀಡಬೇಕಾಗಿತ್ತು ಅಥವಾ ಕಾರ್ಖಾನೆ ಸೂಚನ ಫಲಕದಲ್ಲಿ ನೋಟಿಸ್ ಕೊಡವ ವಿವರವನ್ನು ತಿಳಿಸಬಹುದಾಗಿತ್ತು. ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದರಿಂದ ನಮ್ಮ ಜೀವನದ ಪರಿಸ್ಥಿತಿ ಕೇಳುವವರಾರು. ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ ನಮ್ಮ ದಿನಚರಿಯ ಬದುಕು ಹೇಗೆ ಸಾಗಿಸುವುದು ಎಂದು ತಿಳಿಯದಂತಾಗಿದೆ.
ನಮಗೆ ಅದೇ ಕಂಪನಿಯಲ್ಲಿ ಕೆಲಸ ಕೊಡಬೇಕು ನಮಗೆ ಉದ್ಯೋಗ ನೀಡದಿದ್ದರೆ ಕಾರ್ಮಿಕ ಕಾನೂನು ಅಡಿಯಲ್ಲಿ ನೌಕರರಿಗೆ ನಿವೃತ್ತಿ ವೇತನ ಸೇರಿ ಏನೇನು ಕೊಡಬೇಕು ಅದನ್ನು ನಮಗೆ ಕೊಡಿ ನಮ್ಮ ಬೇಡಿಕೆ ಈಡೇರುವವರೆಗೂ ಹೆಂಗಸರು ಗಂಡಸರು 200 ಜನ ಕಾರ್ಮಿಕರು ಅಹೋ ರಾತ್ರಿ ನಮ್ಮ ಪ್ರಾಣಕ್ಕೆ ಸಂಚಕಾರ ಬಂದರು ಲೆಕ್ಕಿಸದೆ ಹೊರಾಟ ಮಾಡುತ್ತೇವೆ.
ಇದೆ ನಮ್ಮೇಲ್ಲರ ನಿರ್ಮಾನ ಎಂದು ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಕಾರ್ಮಿಕರಾದ ಕಾಂತರಾಜು, ಗಂಗರಾಜು, ವಿಜಯಕುಮಾರ್, ಕಲ್ಯಾಣ ಕುಮಾರ್ ಸೇರಿದಂತೆ ಮಹಿಳಾ ಕಾರ್ಮಿಕರು ಮುಂತಾದವರು ಇದ್ದರು.
ವರದಿ : ಅಯ್ಯಣ್ಣ ಮಾಸ್ಟರ್




