ಕಂಪ್ಲಿ :ಪಟ್ಟಣದ ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಾಲೆಯು ಮತೊಮ್ಮೆ ಉತ್ತಮ ಫಲಿತಾಂಶ ನೀಡಿ ಅತ್ತ್ಯುತ್ತಮ ಸಾಧನೆಯೊಂದಿಗೆ ಹತ್ತನೇ ತರಗತಿಯಲ್ಲಿ ಶೇಕಡಾ 93.33% ಫಲಿತಾಂಶ ಪಡೆದಿದೆ.
ಪ್ರಸಕ್ತ ಶೈಕ್ಷಣಿಕ 2024-25ನೇ ಸಾಲಿನ 10ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ಕಂಪ್ಲಿ ಭಾಗದಲ್ಲಿ ಕಳೆದ ವರ್ಷ ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಭಾರೀ ಸದ್ದು ಮಾಡುತ್ತು, ಈ ವರ್ಷವೂ ಕೂಡ ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಾಲೆಯು ಶೇಕಡಾ 99.33% ರಷ್ಟು ಫಲಿತಾಂಶದೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯಲ್ಲಿ ಕಳೆದ ವರ್ಷ ಸತತ 10ನೇ ವರ್ಷಗಳ ಕಾಲನೂರಕ್ಕೆ ನೂರರಷ್ಟು ಪಲಿತಾಂಶವನ್ನು ಪಡೆದುಕೊಂಡಿತ್ತು.
ಅದೆ ರೀತಿ ಈ ವರ್ಷವೂ ಕೂಡ ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 10 ನೇ ತರಗತಿಯ ಒಟ್ಟು 45ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಪ್ರಥಮ ದರ್ಜೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು ವಿಶೇಷವಾಗಿದೆ.
ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲರಾದ ವಿಷ್ಣು ಕುಮಾರ್ ಅವರು ಮಾಹಿತಿ ಹಂಚಿಕೊಂಡಿದ್ದು, ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಹಾಗೂ ಮೌಲ್ಯಯುತ ಶಿಕ್ಷಣವನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಯಶಸ್ಸು ಸಿಕ್ಕಿರುವುದು ಬಹಳ ಸಂತೋಷ ನೀಡಿದೆ. ಶೇಕಡಾ 93.33% ರಷ್ಟು ಫಲಿತಾಂಶ ಗಳಿಸುವಲ್ಲಿ ಹಗಲಿರುಳು ಶ್ರಮಿಸಿದ ವಿದ್ಯಾರ್ಥಿಗಳಿಗೆ, ಪ್ರಾಂಶುಪಾಲರಿಗೂ, ಎಲ್ಲಾ ಭೋದಕ ಮತ್ತು ಸಿಬ್ಬಂದಿ ವೃಂದದವರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಸಿಬ್ಬಂದಿ ವರ್ಗದವರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




