ಚಿಕ್ಕೋಡಿ: ತಾಲೂಕಿನ ಇಂಗಳಿ ಗ್ರಾಮದ ರೈತರು ಒಬ್ಬರ ಕೃಷಿಹೊಂಡದಲ್ಲಿ ಈಜಲು ಹೋದ ಮೂರು ವಿದ್ಯಾರ್ಥಿ ಮುಳುಗಡೆ ಆಗಿ ಸಾವನಪ್ಪಿರುವ ಘಟನೆ ನಿನ್ನೆ ಸಾಯಂಕಾಲ 8 ಗಂಟೆಗೆ ಪತ್ತೆಯಾಗಿದ್ದು .
ಈ ಕೃಷಿಹೊಂಡದಲ್ಲಿ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ವಿದ್ಯಾರ್ಥಿಯಾದ ಪ್ರಥಮೇಶ್ ಅಭಿಜಿತ್ ಕೆರಬಾ,ವಯಸ್ಸು 13 ಅಥರ್ವ ಸುಧೀರ್ ಸೌಂದಲಗೆ, ವಯಸ್ಸು 15 ಸಮರ್ಥ ಚೌಗುಲೆ( ಉರ್ಪ ಗಡಕರಿ) ವಯಸ್ಸು 13 ಇವರು ಸಾವನಪ್ಪಿದ ದುರ್ದೈವಿ ವಿದ್ಯಾರ್ಥಿಗಳಾಗಿದ್ದಾರೆ.
ಈ ಘಟನೆ ನಡೆದ ಕುರಿತು ಇವತ್ತು ಶಾಸಕರಾದ ಶ್ರೀ ಗಣೇಶ ಕರಿಯೂರು ಭೇಟಿಕೊಟ್ಟು ಮುರುತ ಪಟ್ಟ ಮಕ್ಕಳ ಕುಟುಂಬಸ್ಥರಿಗೆ ಶಾಂತವನ್ನು ಹೇಳಿದರು ಇನ್ನು ಮುಂದೆ ಹೀಗೆ ಮಕ್ಕಳ ಬಗ್ಗೆ ನಿರ್ಲಕ್ಷವಾಗಿ ನಡೆದುಕೊಳ್ಳಬಾರದು ಎಂದು ತಿಳಿಸಿದರು.
ಈ ಘಟನೆ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಚಿಕ್ಕೋಡಿಯ ತಹಸಿಲ್ದಾರ್ ಚಿದಂಬರ ಕುಲಕರ್ಣಿ ಅಂಕಲಿ ಪೊಲೀಸ್ ಠಾಣೆಯ ಪಿ.ಎಸ್.ಐ ನಂದೀಶ್ ಇವರು ಬೆಟ್ಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ: ರಾಜು ಮುಂಡೆ ಚಿಕ್ಕೋಡಿ




