ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇತ್ತೀಚಿಗೆ ಕ್ರೈo ರೇಟ್ ಜಾಸ್ತಿಯಾಗ್ತಿದೆ. ಕಿಡ್ನಾಪ್ ಅಂಡ್ ಮರ್ಡರ್ ಕೇಸ್ ಹೆಚ್ಚು ಭೀತಿ ಸೃಷ್ಟಿಸುತ್ತಿದೆ.ಬೆಂಗಳೂರಿನ ನೀರುಗುಂಟೆಪಾಳ್ಯದಲ್ಲಿ ದುಷ್ಕರ್ಮಿಗಳು ಕಾರಿನಲ್ಲಿ ಕಿಟ್ರ್ಯಾಪ್ ಮಾಡಿ ಯುವಕನ ಬರ್ಬರ ಕೊಲೆ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನೀರುಗುಂಟೆಪಾಳ್ಯದಲ್ಲಿ ಯುವಕನನ್ನು ಕಾರಿನಲ್ಲಿ ಅಪಹರಣ ಮಾಡಿ ಹತ್ಯೆ ಮಾಡಲಾಗಿದೆ.
ಯುವಕನನ್ನು ನಿರುಗುಂಟೆಪಾಳ್ಯದ ಪ್ರೀತಂ (19) ಎಂದು ಗುರುತಿಸಲಾಗಿದೆ. ಪ್ರೀತಂ ತನಗಿಂದ 2 ವರ್ಷ ದೊಡ್ಡವಳಾದ ಯುವತಿಯನ್ನು ಪ್ರೀತಿಸುತ್ತಿದ್ದ, ಯುವತಿ MBBS ಓದುತ್ತಿದ್ದಳು. ಪ್ರೀತಂ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.




