ಕೂಡ್ಲಿಗಿ : ಪಂಚಪೀಠಗಳಲ್ಲಿ ಒಂದಾದ ಉಜ್ಜಿನಿ ಮಠದ ಶ್ರೀ ಮುರುಳಿಸಿದ್ದೇಶ್ವರ ಸ್ವಾಮೀಜಿ ರಥೋತ್ಸವ ನಂತರ 3/5/2025 ರಂದು ದೇವಸ್ಥಾನದ ಶಿಖರಕ್ಕೆ ತೈಲಾಭಿಷೇಕ ಆಚರಣೆ ನಡೆಯಿತು.

ಜರಿಮಲೆ ಪಾಳೆಯಗಾರರ ಮನೆಯಿಂದ ಎಣ್ಣೆ ತಂದು ಪೂಜನೀಯವಾಗಿ ಅರ್ಪಿಸಿದರು. ಇತಿಹಾಸ ಪ್ರಸಿದ್ಧ ಆಚರಣೆಯನ್ನು ಅಭಿಮಾನದಿಂದ ಗೌರವಿಸುವ ನಿಟ್ಟಿನಲ್ಲಿ, ಮಾನ್ಯ ಸಂಸದರಾದ ಈ. ತುಕಾರಾಮ್ ಅವರು, ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು, ಮಾನ್ಯ ಕೆಎಂಎಫ್ ಅಧ್ಯಕ್ಷರಾದ ಶ್ರೀ ಭೀಮಾನಾಯ್ಕ ಅವರು, ಭಕ್ತಿ ಮತ್ತು ಭಾವನೆಯಿಂದ ಪಾಲ್ಗೊಂಡು ಕ್ಷೇತ್ರದ ಜನರ ಒಳಿತಿಗಾಗಿ ಪೂಜೆ ಸಲ್ಲಿಸಿದರು.
ಬಳಿಕ, ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಕ್ಷೇತ್ರ ಮತ್ತು ನಾಡಿನ ಅಭಿವೃದ್ಧಿಯ ಒಳಿತಿಗಾಗಿ ಚರ್ಚಿಸಿದರು. ಈ ವೇಳೆ ಸಾವಿರಾರು ಭಕ್ತರು , ಗಣ್ಯಮಾನ್ಯರು, ಹಿರಿಯರು ಉಪಸ್ಥಿತರಿದ್ದರು.




