Ad imageAd image

ಜಗತ್ತಿನ ಎರಡು ‌ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ : ಕೋಡಿ ಶ್ರೀ 

Bharath Vaibhav
ಜಗತ್ತಿನ ಎರಡು ‌ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ : ಕೋಡಿ ಶ್ರೀ 
Swamiji
WhatsApp Group Join Now
Telegram Group Join Now

ಬಾಗಲಕೋಟೆ : ಕೊರೋನಾ ತರ ಮತ್ತೊಂದು ರೋಗ ಬರುತ್ತದೆ , ಯುದ್ಧ ಸಂಭವಿಸುತ್ತದೆ, ಸಾವು ನೋವುಗಳು ಹೆಚ್ಚಾಗುತ್ತದೆ ಎಂದು ಕೋಡಿಮಠದ ಶ್ರೀಗಳು ಭಯಾನಕ ಭವಿಷ್ಯ ನುಡಿದಿದ್ದಾರೆ.

ಕಾಶ್ಮೀರದಲ್ಲಿ ಉಗ್ರರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಕವಿದಿದ್ದು, ಇದರ ನಡುವೆ ಬಾಗಲಕೋಟೆಯಲ್ಲಿ ಕೋಡಿಮಠದ ಶ್ರೀಗಳು ಭವಿಷ್ಯವೊಂದನ್ನ ನುಡಿದಿದ್ದಾರೆ.

ಕೊರೊನಾ ಬಗ್ಗೆ ಮೊದಲೇ ಹೇಳಿದ್ದೆ ರೋಗ ಬರುತ್ತೆ ಜನ ಸಾಯ್ತಾರೆ ಅಂತ. ಮದ್ದಿಲ್ಲದ ವ್ಯಾದಿ ಬರುತ್ತದೆ ಎಚ್ಚೆತ್ತುಕೊಳ್ಳಬೇಕು ಅಂದೆ. ಎಷ್ಟು ಜನರ ಸತ್ರು ಅಲ್ವೆ? ಈಗಲೂ ಹೇಳ್ತಿನಿ ಅಂತ ಒಂದು ರೋಗ ಬರುವ ಚಾನ್ಸಸ್ ಇದೆ ಎಂದರು.

ಜಗತ್ತಿನ ಎರಡು ‌ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ. ಕೊಲ್ಲಬಹುದು ಅಥವಾ ಅಪಘಾತದಲ್ಲಿ ಅವರು ‌ಸಾಯಬಹುದು ಎಂದು ಆಘಾತಕಾರಿ ಭವಿಷ್ಯ ಹೇಳಿದ್ದಾರೆ.

ಗೌರಿಶಂಕರ ಶಿಖರ ಶಿವಾ ಶಿವಾ ಎಂದೀತು. ಹಿಮಾಲಯದಲ್ಲಿ ಸುನಾಮಿ ಆದೀತು, ಅಲ್ಲಿಂದ ಬಂದು ಡೆಲ್ಲಿಗೆ ತಲುಪುತ್ತದೆ. ಹಿಮಾಲಯ ಸುನಾಮಿಯಿಂದ ಡೆಲ್ಲಿಗೂ ಅಪಾಯವಿದೆ. ಉತ್ತರ ರಾಷ್ಟ್ರಗಳಿಗೆ ಅಪಾಯವಿದೆ. ಜಲಬಾಧೆ ಇದೆ ಎಂದು ಕೋಡಿಮಠದ ಸ್ವಾಮೀಜಿ ಭಯಾನಕ ಭವಿಷ್ಯ ನುಡಿದಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!