ಧರ್ಮಶಾಲಾ: ಸಿಮ್ರಾನ್ ಸಿಂಗ್ ಆಕರ್ಷಕ ಬ್ಯಾಟಿಂಗ್ ಹಾಗೂ ಅರ್ಷದೀಪ್ ಸಿಂಗ್ ಬಿಗಿಯಾದ ಬೌಲಿಂಗ್ ದಾಳಿಯಿಂದ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡ ಇಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 54 ನೇ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಗೇಂಟ್ಸ್ ತಂಡದ ವಿರುದ್ಧ 37 ರನ್ ಗಳ ಗೆಲುವು ಸಾಧಿಸಿತು.

ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರುಗಳಲ್ಲಿ 5 ವಿಕೆಟ್ ಗೆ 236 ರನ್ ಗಳಿಸಿತು. ಬೃಹತ್ ಮೊತ್ತದ ಗೆಲುವಿನ ಗುರಿ ಹೊಂದಿದ್ದ ಲಕ್ನೋ ಸೂಪರ್ ಗೇಂಟ್ಸ್ ತಂಡ 7 ವಿಕೆಟ್ ಗೆ 199 ರನ್ ಗಳನ್ನು ಮಾತ್ರ ಗಳಿಸಿತು.
ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡ 11 ಪಂದ್ಯಗಳನ್ನು ಆಡಿ 7 ರಲ್ಲಿ ಗೆದ್ದು ( ಒಂದು ಪಂದ್ಯ ಅನಿರ್ನಿತ) ಒಟ್ಟು 15 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆಯಿತು.
ಸ್ಕೋರ್ ವಿವರ:
ಪಂಜಾಬ್ ಕಿಂಗ್ಸ್ 20 ಓವರುಗಳಲ್ಲಿ 5 ವಿಕೆಟ್ ಗೆ 236 ( ಸಿಮ್ರಾನ್ ಸಿಂಗ್ 91 ( 48 ಎಸೆತ, 6 ಬೌಂಡರಿ, 7 ಸಿಕ್ಸರ್)
ಶ್ರೇಯಸ್ ಅಯ್ಯರ 45 ( 25 ಎಸೆತ, 4 ಬೌಂಡರಿ, 2 ಸಿಕ್ಸರ್), ಶಶಾಂಕ ಸಿಂಗ್ 33 ( 15 ಎಸೆತ, 4 ಬೌಂಡರಿ, 1 ಸಿಕ್ಸರ್)
ಜೋಶ್ ಇಂಗ್ಲೀಷ್ 30 ( 14 ಎಸೆತ, 1 ಬೌಂಡರಿ, 4 ಸಿಕ್ಸರ್ ) ಆಕಾಷ್ ಮಹಾರಾಜ ಸಿಂಗ್ 30 ಕ್ಕೆ 2) ದಿಗ್ವೇಶ್ ರಾಠಿ 46 ಕ್ಕೆ ಲಕ್ನೋ ಸೂಪರ್ ಗೇಂಟ್ಸ್ 20 ಓವರುಗಳಲ್ಲಿ 7 ವಿಕೆಟ್ ಗೆ 199
ಐಯುಷ್ ಬದೋನಿ 74 ( 40 ಎಸೆತ, 5 ಬೌಂಡರಿ, 5 ಸಿಕ್ಸರ್), ಅಬ್ದುಲ್ ಸಾಮದ 45 ( 24 ಎಸೆತ, 2 ಬೌಂಡರಿ, 4 ಸಿಕ್ಸರ್)
ಅರ್ಷದೀಪ್ ಸಿಂಗ್ 16 ಕ್ಕೆ 3, ಓಮರ್ ಜೈ 33 ಕ್ಕೆ 2)
ಪಂದ್ಯ ಶ್ರೇಷ್ಠ: ಸಿಮ್ರಾನ್ ಸಿಂಗ್




