ಹೈದರಾಬಾದ: ದೆಹಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಜರ್ಸ್ ಹೈದರಾಬಾದ್ ನಡುವಣ ಕಳೆದ ರಾತ್ರಿ ಇಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 55 ನೇ ಲೀಗ್ ಪಂದ್ಯ ಮಳೆಯ ಕಾರಣ ಫಲಿತಾಂಶ ಕಾಣಲಿಲ್ಲ.
ರಾಜೀವ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಮಳೆಯಿಂದ ಅಪೂರ್ಣಗೊಂಡ ಪರಿಣಾಮ ಎರಡೂ ತಂಡಗಳಿಗೂ ತಲಾ 1 ಅಂಕ ನೀಡಲಾಯಿತು. ದೆಹಲಿ ಕ್ಯಾಪಿಟಲ್ಸ್ 13 ಅಂಕಗಳೊಂದಿಗೆ 5 ನೇ ಸ್ಥಾನದಲ್ಲಿದ್ದರೆ, ಸನ್ ರೈಜರ್ಸ್ ಹೈದರಾಬಾದ ತಂಡವೂ 7 ಅಂಕಗಳೊಂದಿಗೆ 8 ನೇ ಸ್ಥಾನದಲ್ಲಿದೆ.
ಅಪೂರ್ಣ ಸ್ಕೋರ್ ವಿವರ:
ದೆಹಲಿ ಕ್ಯಾಪಿಟಲ್ಸ್ 20 ಓವರುಗಳಲ್ಲಿ 7 ವಿಕೆಟ್ ಗೆ 133




