ನವದೆಹಲಿ: ರಾಷ್ಟ್ರಪತಿ ದೌವದಿ ಮುರ್ಮು ಅವರು ಮೇ 19 ರಂದು ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿ ಅಯಪ್ಪ ಸ್ವಾಮಿಯ ದರ್ಶನ ಪಡೆಯಲಿದ್ದಾರೆ.
ಇದರೊಂದಿಗೆ ದೇಶದ ಇತಿಹಾಸದಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಅವರು
ಪಾತ್ರರಾಗಲಿದ್ದಾರೆ.
ದೇವಾಲಯ ನಿರ್ವಹಣಾ ಸಂಸ್ಥೆಯಾದ ತಿರುವಾಂಕೂರು ದೇವಸ್ಸಂ ಮಂಡಳಿಯು ರಾಷ್ಟ್ರಪತಿಗಳ ಭೇಟಿಯನ್ನು ದೃಢಪಡಿಸಿದ್ದು. ಇದಕ್ಕೆ ಪ್ರತಿಕ್ರಿಯಿಸಿದ ಅಡಳಿತ ಮಂಡಳಿ ಇದು ದೇಶದ ಇತಿಹಾಸದಲ್ಲಿ ಹಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ. ಇಮ್ಮ ರಾಷ್ಟ್ರಪತಿಗಳ ಭೇಟಿಗೆ ಎಸ್‌ಪಿಜಿ ಮತ್ತು ದೇವಾಲಯ ಆಡಳಿತ ಮಂಡಳಿ ಸಿದ್ದತೆಗಳನ್ನು ಅರಂಭಿಸಿದೆ.
ರಾಷ್ಟ್ರಪತಿ ದೌವದಿ ಮುರ್ಮು ಮೇ 18 ಮತ್ತು 19 ರಂದು ಎರಡು ದಿನಗಳ ಕೇರಳ ಪ್ರವಾಸ ಕೈಗೊಳ್ಳಲಿದ್ದು ಮೇ 18 ರಂದು ಕೇರಳದ ಹೊಟ್ಟಾಯಂ ಜಿಲ್ಲೆಯಲ್ಲಿ ಖಾಸಗಿ ಸಮಾರಂಭವೊಂದರಲ್ಲಿ ಭಾಗವಹಿಸಲಿದ್ದಾರೆ.
ಇದಾದ ಬಳಿಕ ಮೇ 19 ರಂದು ಶಬರಿಮಲೆ ದೇವಸ್ಥಾನದ ಬಳಿಯಿರುವ ನೀಲಕಲ್ ಹಲಿಪ್ಯಾಡ್‌ಗೆ ಬಂದಿಳಿಯುವ ಅವರು ಇಲ್ಲಿಂದ ಪಂಪಾ ಬೇಸ್ ಕ್ಯಾಂಪ್‌ಗೆ ತೆರಳಿ ಅಲ್ಲಿಂದ 4.25 ಕಿಲೋಮೀಟರ್ ದೂರದಲ್ಲಿರುವ ಬೆಟ್ಟವನ್ನು ಬರಿಗಾಲಲ್ಲೇ ಹತ್ತಲಿದ್ದಾರೆ. ಎಂದು ಹೇಳಲಾಗುತ್ತಿದ್ದು ಈ ಕುರಿತು ಅಂತಿಮ ನಿರ್ಧಾರವನ್ನು ಎಸ್‌ಪಿಜಿ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ.




