ಬೆಳಗಾವಿ,: ನಿನ್ನೆ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪತಿ, ಪತ್ನಿ ಮತ್ತು ಅವರ ಒಂದು ವರ್ಷದ ಮಗು ಸಾವನ್ನಪ್ಪಿದ್ದಾರೆ. ದುರ್ದೈವಿಗಳ ಸಂಬಂಧಿಕರು ಹೇಳುವ ಪ್ರಕಾರ ತವರು ಮನೆಗೆ ಹೋಗಿದ್ದು ಪತ್ನಿಯನ್ನು ಮನೆಗೆ ಕರೆತರಲು ಬೆಳಗಾವಿಯಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿರುವ ಅಯಾಜ್ ಕಾರಲ್ಲಿ ಹೋಗಿದ್ದರು. ವಾಪಸ್ಸು ಬರುವಾಗ ಕಾರೊಂದನ್ನು ಓವರ್ ಟೇಕ್ ಮಾಡುವಾಗ ಅಪಘಾತ ಸಂಭವಿಸಿದೆ. ಅಯಾಜ್, ಅನಿಸಾ ಮತ್ತು ಅವರ ಮಗು ಸ್ಥಳದಲ್ಲೇ ಮೃತಪಟ್ಟರೆ ಅವರೊಂದಿಗೆ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಹುಡುಗಿಯ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.




