ಸೇಡಂ: ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನ ಕೊಡಮಾಡುವ ರಾಜ್ಯ ಮಟ್ಡದ ಸ್ವರ್ಣ ಸಿರಿ ಪ್ರಶಸ್ತಿಗೆ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಶಿವು ಅಪ್ಪಾಜಿ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಸಂಚಾಲಕ ರಾಜೇಂದ್ರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ. 11 ರಂದು ಹುಬ್ಬಳ್ಳಿಯ ಮಹಾರಾಷ್ಟ್ರ ಮಂಡಳ ಸಭಾಂಗಣದಲ್ಲಿ ನಡೆಯುವ ಭಾವ ಸಂಗಮ ಸಾಂಸ್ಕೃತಿಕ ತೋರಣ, ಹನ್ನೊಂದನೆ ವಾರ್ಷಿಕ ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶಿವಕುಮಾರ ಅಪ್ಪಾಜಿ ಅವರ ಮಾಧ್ಯಮ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ನಾಡಿನ ಹೆಸರಾಂತ ಸಾಹಿತಿಗಳು, ಸಂಘಟಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವರದಿ ವೆಂಕಟಪ್ಪ ಕೆ ಸುಗ್ಗಾಲ್




