Ad imageAd image

ಭಾರತದ ದಾಳಿಗೆ ಬೆದರಿ ವಾಯುವದೇಶವನ್ನೇ ಬಂದ್ ಮಾಡಿದ ಪಾಕ್

Bharath Vaibhav
ಭಾರತದ ದಾಳಿಗೆ ಬೆದರಿ ವಾಯುವದೇಶವನ್ನೇ ಬಂದ್ ಮಾಡಿದ ಪಾಕ್
WhatsApp Group Join Now
Telegram Group Join Now

ಆಸ್ತಮಾಬಾದ್‌ : ಭಾರತದ ಆಪರೇಷನ್ ಸಿಂದೂ‌ ಕಾರ್ಯಾಚರಣೆಯಿಂದ ಕಂಗಾಲಾಗಿರುವ ಪಾಕ್ ಇದೀಗ ತನ್ನ ವಾಯುಪ್ರದೇಶವನ್ನು ಅನಿರ್ದಿಷ್ಟ ಕಾಲ ಬಂದ್ ಮಾಡಿದ್ದು ಇದರೊಂದಿಗೆ ವಾತ್ ಇವರ ದೇಶಗಳ ವಿಮಾನ ಹಾರಾಟದ ಜೊತೆಗೆ ತನ್ನದೇ ನಾಗರಿಕ ವಿಮಾನಗಳ ಹಾರಾಟಕ್ಕೆ ವಾಯುಪ್ರದೇಶವನ್ನು ಬಂದ್‌ ಮಾಡಿದಂತಾಗಿದೆ.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲಾಮ್‌ನಲ್ಲಿ ನಡೆದ ಭೀಕದ ಭಯೋತ್ಪಾದಕ ದಾಳಿಯ ಬಳಿಕ ಭಾರತ – ಪಾಕ್ ನಡುವೆ ಉದ್ವಿಗ್ನವ ಉಂಟಾಗಿತ್ತು ಈ ಸಮಯದಲ್ಲಿ ಮೊದಲು ವಾಕ್ ಭಾರತೀಯ ವಿಮಾನಗಳಿಗೆ ಮಾತ್ರ ವಾಯುಪ್ರದೇಶವನ್ನು ಮುಚ್ಚಿಟ್ಟು, ಆದರೆ ಬುಧವಾರ ಮುಂಜಾನೆ ಭಾರತೀಯ ಸೇವೆ ವಾಕ್ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ನಡೆಸಿದ ಕ್ಷಿಪಣಿ ದಾಳಿಗೆ ಬೆಚ್ಚಿದ ಪಾಕಿಸ್ತಾನದ ಹೈಕಮಾಂಡ್ ತನ್ನ ದೇಶದ ನಾಗರಿಕ ವಿಮಾನ ಸೇರಿದಂತೆ ಎಲ್ಲಾ ದೇಶಗಳ ವಿಮಾನಗಳ ಹಾರಾಟಕ್ಕೆ ವಾಯುಪ್ರದೇಶವನ್ನು ಅನಿರ್ದಿಷ್ಟ ಕಾಲ ಬಂದ್ ಮಾಡಿದ

ಮುನ್ನೆಚ್ಚರಿಕೆ ಕ್ರಮ ಎಂದ ಪಾಕ್ ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರವು ಮುಂದಿನ 48 ಗಂಟೆಗಳ ಕಾಲ ಪಾಕಿಸ್ತಾನದ ವಾಯುವುದೇಶವು ಹಾರಾಟ ನಿಷೇಧಿತ ವಲಯವಾಗಿ ಉಳಿಯುವಂತೆ ಆದೇಶಿಸಿದ್ದು, ಇದು ಮುನ್ನೆಚ್ಚರಿಕೆ ಕ್ರಮ ಎಂದು ಪಾಕ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಪಾಕಿಸ್ತಾನ ಈಗ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂಬುದನ್ನು ನಿರ್ಧರಿಸಲು ಪಾಕಿಸ್ತಾನ ಪ್ರಧಾವಿ ಶಹಬಾಜ್ ಷರೀಫ್ ರಾಷ್ಟ್ರೀಯ ಭದ್ರತಾ ಮಂಡಳಿಯೊಂದಿಗೆ ಸಭೆ ನಡೆಸಿದ್ದಾರೆ. ಭಾರತೀಯ ವಾಯುದಾಳಿಯ ನಂತರ, ಇಸ್ಲಾಮಾಬಾದ್ ಮತ್ತು ಲಾಹೋ‌ಗೆ ಹೋಗುವ ಎಲ್ಲಾ ವಿಮಾನಗಳನ್ನು ಕರಾಚಿ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದ್ದು, ಇದರಿಂದಾಗಿ ಅಲ್ಲಿನ ವಿಮಾನ ಕಾರ್ಯಾಚರಣೆಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಂತಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!