ಕೋಲ್ಕತ್ತಾ: ಶಿವಂ ದುಬೈ ಹಾಗೂ ಡೆವಲ್ಡ್ ಬ್ರೇವಿಸ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 57 ನೇ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 2 ವಿಕೆಟ್ ಗಳ ರೋಚಕ ಜಯ ಸಾಧಿಸಿತು.
ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರುಗಳಲ್ಲಿ 6 ವಿಕೆಟ್ ಗೆ 179 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಆಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 19.4 ಓವರುಗಳಲ್ಲಿ 8 ವಿಕೆಟ್ ಗೆ 183 ರನ್ ಗಳಿಸಿ 2 ವಿಕೆಟ್ ಗಳಿಂದ ಗೆದ್ದಿತು.

——–ಕೆಕೆಆರ್ ಪರ ಉಪಯುಕ್ತ ರನ್ ಕಲೆ ಹಾಕಿದ ಮನೀಷ್ ಪಾಂಡೆ
ಇದರೊಂದಿಗೆ ಮುಂದಿನ ಹಂತಕ್ಕೇರಲು ಗೆಲ್ಲಬೇಕಾಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನಿರಾಸೆ ಅನುಭವಿಸಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಪಂದ್ಯಾವಳಿಯಿಂದ ಹೊರ ಬಿದ್ದರೂ ಕೂಡ ತನ್ನ ಮೂರನೇ ಗೆಲುವನ್ನು ಪಡೆದು ಸಮಾಧಾನ ಪಟ್ಟಿತು.
ಸ್ಕೋರ್ ವಿವರ:
ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರುಗಳಲ್ಲಿ 6 ವಿಕೆಟ್ ಗೆ 179
ಅಜಿಂಕೆ ರೆಹಾನೆ 48 ( 33 ಎಸೆತ, 4 ಬೌಂಡರಿ, 2 ಸಿಕ್ಸರ್), ಮನಿಷ್ ಪಾಂಡೆ 36 ( 28 ಎಸೆತ, 1 ಬೌಂಡರಿ, 1 ಸಿಕ್ಸರ್)
ರಸಲ್ 38 ( 21 ಎಸೆತ, 4 ಬೌಂಡರಿ, 3 ಸಿಕ್ಸರ್), ನೂರ್ ಅಹ್ಮದ್ 31 ಕ್ಕೆ 4)
ಚೆನ್ನೈ ಸೂಪರ್ ಕಿಂಗ್ಸ್ 19.4 ಓವರುಗಳಲ್ಲಿ 8 ವಿಕೆಟ್ ಗೆ 183
ಡೆವಲ್ಡ್ ಬ್ರೇವಿಸ್ 52 ( 25 ಎಸೆತ, 4 ಬೌಂಡರಿ, 4 ಸಿಕ್ಸರ್), ಶಿವಂ ದುಬೈ 45 ( 40 ಎಸೆತ, 2 ಬೌಂಡರಿ, 3 ಸಿಕ್ಸರ್)
ಉರವಿಲ್ 31 ( 11 ಎಸೆತ, 1 ಬೌಂಡರಿ, 4 ಸಿಕ್ಸರ್) ವರುಣ್ ಚರ್ಕವರ್ತಿ 18 ಕ್ಕೆ 2)
–ಪಂದ್ಯ ಶ್ರೇಷ್ಠ: ನೂರ್ ಅಹ್ಮದ್- 31 ಕ್ಕೆ 4




