ಸಿಂಧನೂರು : ಮೇ 8 ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಇಡೀ ಕರ್ನಾಟಕ ರಾಜ್ಯದ್ಯಂತ ಸಂಚಾರಿಸುತ್ತಿರುವ ಕ್ರಾಂತಿಕಾರಿ ರಥಯಾತ್ರೆಯೂ ಮೇ 9. 2025 ರಂದು ಸಿಂಧನೂರಿಗೆ ಆಗಮಿಸುತ್ತಿದ್ದು ಮಾದಿಗ ಸಮಾಜದ ಬಂಧುಗಳೇ ಕ್ರಾಂತಿಕಾರಿ ರಥ ಯಾತ್ರೆಯನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ನಗರದ ಪಿ ಡಬ್ಲ್ಯೂ ಡಿ ಕ್ಯಾಂಪಿನಲ್ಲಿರುವ ಡಾ. ಅಂಬೇಡ್ಕರ್ ಅವರ ಪುತ್ಥಳಿಯಿಂದ ನಗರದ ಗಾಂಧಿ ಸರ್ಕಲ್ ನವರಿಗೆ ಬೈಕ್ ರ್ಯಾಲಿ ಮೂಲಕ , ಜೈ ಭೀಮ್ ಜೈ ಮಾದಿಗ ಎಂಬ ಘೋಷಣೆ ಮೊಳಗಿಸುತ್ತಾ ಜನಗಳಿಗೆ ಜಾಗೃತಿ ಮೂಡಿಸಲಾಗುತ್ತದೆ ಆದ್ದರಿಂದ ಸಮಾಜದ ಬಂಧುಗಳು ವಕೀಲರು ನೌಕರಸ್ಥರು ಹಿರಿಯ ಹೋರಾಟಗಾರರು ಸಂಘ ಸಂಸ್ಥೆಯ ಮುಖಂಡರು ಸಾಹಿತಿಗಳು ಬುದ್ಧಿಜೀವಿಗಳು ಒಳ ಮೀಸಲಾತಿ ಬೆಂಬಲಿಸುವ ಎಲ್ಲಾರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರಾಂತಿಕಾರಿ ರಥಯಾತ್ರೆಯನ್ನು ಯಶಸ್ವಿಗೊಳಿಸಲು ನಗರದ ಪ್ರವಾಸಿ ಮಂದಿರದಲ್ಲಿ ಮಾದಿಗ ಮುಖಂಡರು ಸಭೆ ಸೇರಿ ರೂಪರೇಷೆಗಳ ಬಗ್ಗೆ ಪ್ರಸ್ತಾಪಿಸಲಾಯಿತು.
ಈ ಸಂದರ್ಭದಲ್ಲಿ ಮಾದಿಗ ಮುಖಂಡರಾದ. ಅಲ್ಲಮಪ್ರಭು ಪೂಜಾರಿ. ಜಗದೀಶ್ ವಕೀಲರು. ಹನುಮಂತ ಹಂಪನಾಳ. ಯಮನೂರ ಪರಾಪುರ. ಮುತ್ತು ಸಾಗರ್. ಗುರುರಾಜ ಮುಕುಂದ. ದುರುಗೇಶ್ ಬಾಲಿ. ಮಹೇಶ್ ಸುಕಲ್ಪೇಟೆ. ಶಿವು ಉಪ್ಪಲದೊಡ್ಡಿ.ಈರಣ್ಣ ಸುಲ್ತಾನಾಪುರ. ಹನುಮಂತ ಜಾಲಿಹಾಳ. ನಾಗರಾಜ್ ಸಾಸಲಮರಿ. ನಾಗರಾಜ ಹೆಡಗಿ ಬಾಳ. ಬಾಲಸ್ವಾಮಿ ತಿಡಿಗೋಳು. ಶಶಿ ವಿರುಪಾಪುರ. ಆರ್ ಅಶೋಕ್ ಸಾಗರ್. ಶೇಖರ್ ಗುಂಜಳ್ಳಿ. ನಾಗರಾಜ್ ಭಂಡಾರಿ.
ಇನ್ನು ಅನೇಕರಿದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ.




