ಸರಕಾರದ ಆದೇಶಕ್ಕೂ ಡೋಂಟ್ ಕೇರ್
ಲಿಂಗಸ್ಗೂರು : ದೇಶಾದ್ಯಂತ ಶ್ರೀ ಭಗೀರಥ ಮಹರ್ಷಿ ಜಯಂತಿ ಆಚರಣೆಯಲ್ಲಿ ಸಂಭ್ರಮದಲ್ಲಿದ್ದರೆ ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯಾಗಿ ಜಗನ್ನಾಥ್
ಶ್ರೀ ಭಗೀರಥ ಜಯಂತಿಗೆ ಹಾಜಿರಾಗದೆ ಬೇಜವಾಬ್ದಾರಿತನದಿಂದ ನಿರ್ಲಕ್ಷ್ಯ ಮಾಡಿರುವುದು ನೋಡಿದರೆ, ಸರ್ಕಾರ ಆದೇಶಕ್ಕೂ ಕಿಮ್ಮತ್ತು ನೀಡದ ಇಂಥ ಒಬ್ಬ ಬೇಜವಾಬ್ದಾರಿ ಅಧಿಕಾರಿ ನಮ್ಮ ಹಟ್ಟಿ ಪಟ್ಟಣ ಪಂಚಾಯತಿಗೆ ಬೇಕೆ.
ನಮ್ಮ ಭಾರತ ದೇಶದಲ್ಲಿ ತನ್ನ ಕಠಿಣ ತಪಸ್ಸಿನಿಂದ ಗಂಗೆಯನ್ನೇ ಧರೆಗೆ ತಂದ ಮಹರ್ಷಿ ಭಗಿರಥ ಇವರು
ಇಂಥ ಮಹನೀಯರಿಗೆ ಈ ದೇಶದ ಪ್ರಧಾನ ಮಂತ್ರಿ ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿಗಳು ಸಚಿವರು ಶಾಸಕರು ಮತ್ತು ದೇಶದ ಎಲ್ಲಾ ಇಲಾಖೆಯ ಅಧಿಕಾರಿಗಳು ಶ್ರೀ ಭಗೀರಥ ಜಯಂತಿಯನ್ನು ಆಚರಿಸಿ ಅವರಿಗೆ ಗೌರವ ನಮನ ಸಲ್ಲಿಸಿದರೆ,
ಲಿಂಗಸುಗೂರು ಪಟ್ಟಣದಲ್ಲಿ ವಾಸವಾಗಿರುವ ಬೇಜವಾಬ್ದಾರಿ ಹಟ್ಟಿ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ ಜಗನ್ನಾಥ್ ಸರ್ಕಾರ ಆದೇಶಕ್ಕೆ ಕಿಮ್ಮತ್ತು ನೀಡದ ಹಟ್ಟಿಯಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಇವರು ಸಮಯಕ್ಕೆ ಸರಿಯಾಗಿ ಬಂದು ಶ್ರೀ ಭಗೀರಥ ಮಹರ್ಷಿಗೆ ಗೌರವನ ಸಲ್ಲಿಸುವುದನ್ನು ಬಿಟ್ಟು ನಿರ್ಲಕ್ಷ ತೋರಿರುವ ಇಂತಹ ಅಧಿಕಾರಿಯ ವಿರುದ್ಧ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಕೂಡಲೇ ಇವರನ್ನು ಅಮಾನತು ಮಾಡಬೇಕೆಂದು ಇಲ್ಲಿಯ ಭಗಿರಥ ಸಮಾಜದ ಮುಖಂಡರು ಒತ್ತಾಯ ಮಾಡಿದ್ದಾರೆ ಒಂದು ವೇಳೆ ಈ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡದಿದ್ದರೆ ಹಟ್ಟಿ ಪಟ್ಟಣ ಪಂಚಾಯಿತಿಯ ಮುಂದೆ ಹಟ್ಟಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಯನ್ನು ಅಮಾನತು ಆದೇಶ ಹೊರಡಿಸುವವರೆಗೂ ಪ್ರತಿಭಟನೆ ಧರಣಿ ನಡೆಸಲಾಗುವುದೆಂದು ಅಂದಾಗ ಮಾತ್ರ ಇಂಥ ಬೇಜಾಬ್ದಾರಿ ಅಧಿಕಾರಿಗಳಿಗೆ ಬುದ್ಧಿ ಬರುತ್ತದೆ.

ಶ್ರೀ ಭಗೀರಥ ಮಹರ್ಷಿಗೆ ಅವಮಾನ ಮಾಡಿದ ಮುಖ್ಯ ಅಧಿಕಾರಿಯನ್ನು ಕೂಡಲೇ ಅಮಾನತ್ತು ಮಾಡಬೇಕು
ಶ್ರೀ ಭಗೀರಥ ಉಪ್ಪಾರ್ ಸಮಾಜದ ಗೌರವಾಧ್ಯಕ್ಷರಾದ ಎನ್ ಸ್ವಾಮಿ ನಾಯ್ಕೋಡಿ,




