Ad imageAd image

‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಯಶಸ್ವಿಯಾಗಿದ್ದಕ್ಕೆ ವಿಜಯೋತ್ಸವ

Bharath Vaibhav
‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಯಶಸ್ವಿಯಾಗಿದ್ದಕ್ಕೆ ವಿಜಯೋತ್ಸವ
WhatsApp Group Join Now
Telegram Group Join Now

ವಿಜಯಪುರ: ಕಾಶ್ಮೀರದ ಪೆಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕ್ಷಿಪಣಿ ದಾಳಿ ಕೈಗೊಂಡಿರುವ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಯಶಸ್ವಿಯಾಗಿದ್ದಕ್ಕೆ ಇಂದು ಬಸವನಬಾಗೇವಾಡಿ ಪಟ್ಟಣದಲ್ಲಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆಯಿಂದ ವಿಜಯೋತ್ಸವ ಆಚರಣೆ ಮಾಡಲಾಯಿತು.

ಭಾರತ ಮಾತಾ ಕಿ ಜೈ ಭಾರತೀಯ ಸೈನ್ಯಕ್ಕೆ ಜೈ ಪಾಪಿ ಪಾಕಿಸ್ತಾನಕ್ಕೆ ಧಿಕ್ಕಾರ ಅಂತ ಘೋಷಣೆಗಳನ್ನು ಕೂಗುತ್ತಾ ಬಸವೇಶ್ವರ ವೃತ್ತದಲ್ಲಿ ಸೇರಿದ ರಾಷ್ಟ್ರೀಯ ಬಸವಸೈನ್ಯದ ಕಾರ್ಯಕರ್ತರು ನಂತರ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ ನಮ್ಮ ಹೆಮ್ಮೆಯ ಭಾರತೀಯ ಸೈನ್ಯದ ಜೊತೆ ನಾವು ಸದಾ ಇದ್ದೇವೆ ನಿನ್ನೆ ರಾತ್ರಿ ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳ ಮೇಲೆ ಭಾರತೀಯ ಸಶಸ್ತ್ರ ಪಡೆ ಕ್ಷಿಪಣಿ ದಾಳಿ ಮಾಡಿ ಉಗ್ರರ ಅಡುಗು ತಾಣಗಳನ್ನು ನಾಶ ಮಾಡಿದ ಭಾರತೀಯ ಸೈನ್ಯದ ಜೊತೆ ನಾವೆಲ್ಲ ಭಾರತೀಯರು ಸದಾ ಇದ್ದೇವೆ ಅಂತ ಹೇಳಿದರು.

ಇದೆ ಸಮಯದಲ್ಲಿ ಶ್ರೀಕಾಂತ್ ಕೊಟ್ರಶೆಟ್ಟಿ ಸುನೀಲ್ ಚಿಕ್ಕೋoಡ ಅಪ್ಪು ಗಬ್ಬುರ ಸಂಗನಬಸು ಪೂಜಾರಿ ಸಲೀಮ್ ಸೈಯದ್ ಸದಾನಂದ್ ಸುಲಾಖೆ ಮತ್ತು ಊರಿನ ಮುಖಂಡರು ಉಪಸ್ಥಿತರಿದ್ದರು.
ವರದಿ: ಕೃಷ್ಣ H ರಾಠೋಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!