Ad imageAd image

ಡಾ.ಬಿ ಆರ್ ಅಂಬೇಡ್ಕರ್ ಅವರ 134ನೇ ಜಯಂತೋತ್ಸವದ ಅಂಗವಾಗಿ ಪ್ರತಿಭಾ ಪುರಸ್ಕಾರ, ಸಾಮೂಹಿಕ ವಿವಾಹ, ಕಾರ್ಯಕ್ರಮದ ಪೂರ್ವ ತಯಾರಿ

Bharath Vaibhav
ಡಾ.ಬಿ ಆರ್ ಅಂಬೇಡ್ಕರ್ ಅವರ 134ನೇ ಜಯಂತೋತ್ಸವದ ಅಂಗವಾಗಿ ಪ್ರತಿಭಾ ಪುರಸ್ಕಾರ, ಸಾಮೂಹಿಕ ವಿವಾಹ, ಕಾರ್ಯಕ್ರಮದ ಪೂರ್ವ ತಯಾರಿ
WhatsApp Group Join Now
Telegram Group Join Now

ನಿಡಗುಂದಿ :ತಾಲೂಕಿನಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವದ ಅಂಗವಾಗಿ ಪೂರ್ವಸಿದ್ಧತೆ ತಾಲೂಕಿನ ಚಲವಾದಿ ಮಹಾಸಭಾ ಅಧ್ಯಕ್ಷರಾದ ಶೇಖರ್ ದೊಡಮನಿ ಅವರ ನೇತೃತ್ವದಲ್ಲಿ ತಾಲೂಕ ಚಲವಾದಿ ಎಲ್ಲ ಪದಾಧಿಕಾರಿಗಳು ಸೇರಿದಂತೆ ಅದ್ದೂರಿ ಕಾರ್ಯಕ್ರವನ್ನು ನಿಡಗುಂದಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಬೃಹತ್ ಆಕಾರದ ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.

ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ನಿಡುಗುಂದಿ ಭಾಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಮೂಹಿಕ ವಿವಾಹ, ಅಂಬೇಡ್ಕರ್ ರತ್ನ ಪ್ರಶಸ್ತಿ ವಿತರಣೆ, ಭೋಜನದ ವ್ಯವಸ್ಥೆ ಕಾರ್ಯಕ್ರಮದ ಪೂರ್ವ ತಯಾರಿ ನಡೆಸಿದ್ದಾರೆ.

ಈ ಕಾರ್ಯಕ್ರಮದ ಪೂರ್ವ ಸಿದ್ಧತೆಯ ವಿವರವನ್ನು ಪ್ರಶಾಂತ ಚಲವಾದಿ ಮಾಧ್ಯಮದಲ್ಲಿ ಹೀಗೆ ಹೇಳಿದ್ದಾರೆ.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹಡಗಲಿ ನಿಡುಗುಂದಿ, ಉದ್ಘಾಟಕರಾಗಿ ಸನ್ಮಾನ್ಯ ಶ್ರೀ ಡಾ. ಜಿ ಪರಮೇಶ್ವರ್ ಗೃಹ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು.
ಅಧ್ಯಕ್ಷರು ಸನ್ಮಾನ ಶ್ರೀ ಶಿವಾನಂದ್ ಎಸ್ ಪಾಟೀಲ್. ಸಕ್ಕರೆ ಜವಳಿ ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರು.

ಇನ್ನು ಅನೇಕ ಮಹಾನ್ ನಾಯಕರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.ಕಾರ್ಯಕ್ರಮಕ್ಕೆ ನಿಡಗುಂದಿಯ ಸಮಸ್ತ ಸಾರ್ವಜನಿಕರು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.

ಆಪರೇಷನ್ ಸಿಂಧೂರ್ ಯಶಸ್ಸಿಗೆ ಅಭಿನಂದನೆಗಳ ಮಹಾಪೂರವನ್ನು ತಾಲೂಕು ಚಲವಾದಿ ಮಹಾ ಸಂಘದಿಂದ ಯೋಧರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಪೂರ್ವಸಿದ್ಧತೆಯ ತಯಾರಿಯನ್ನು ಸಿಂಧೂರ್ ಭೈರವಡಗಿ, ಬಸವರಾಜ್ ಆಲಕೊಪ್ಪರ, ಡೊಂಗ್ರಿ ಭಜಂತ್ರಿ, ಉಮೇಶ್ ಭಜಂತ್ರಿ, ಬಸವರಾಜ್ ನಿಡಗುಂದಿ ಇನ್ನು ಅನೇಕ ತಾಲೂಕ ಚಲವಾದಿ ಮಹಾಸಭಾ ಸದಸ್ಯರಿಗೆ ಇದ್ದರು.

ವರದಿ: ಅಲಿ ಮಕಾನದಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!