Ad imageAd image

ಭಾರತದ ಹೊಡೆತಕ್ಕೆ ಐವರೂ ಕುಖ್ಯಾತ ಭಯೋತ್ಪಾದಕರೇ ಫಿನಿಷ್ 

Bharath Vaibhav
ಭಾರತದ ಹೊಡೆತಕ್ಕೆ ಐವರೂ ಕುಖ್ಯಾತ ಭಯೋತ್ಪಾದಕರೇ ಫಿನಿಷ್ 
WhatsApp Group Join Now
Telegram Group Join Now

ಪಾಕಿಸ್ತಾನ : ಪಹಲ್ಗಾಮ್‌ ಉಗ್ರರ ದಾಳಿಗೆ ಪ್ರತಿಯಾಗ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಘೋಷಿಸಿದೆ. ಮೇ. 7 ರಂದು ಕೈಗೊಂಡ ಈ ಕಾರ್ಯಾಚರಣೆಯಲ್ಲಿ ಮೃತರಾದ ಉಗ್ರರ ಗುರುತನ್ನ ಭಾರತ ಬಹಿರಂಗಪಡಿಸಿದೆ.

ಈ ಐವರೂ ಸಹ ಕುಖ್ಯಾತ ಭಯೋತ್ಪಾದಕರಾಗಿದ್ದು ವಿವಿಧ ಸಂಘಟನೆಗಳಿಗೆ ಸೇರಿದವರಾಗಿದ್ದಾರೆ.ಮುದಸ್ಸರ್‌ ಖಾದಿಯಾನ್‌ ಖಾಸ್‌ ಅಲಿಯಾಸ್‌ ಮುದಸ್ಸರ್‌ ಲಷ್ಕರೆ ತೈಬಾ ಸಂಘಟನೆಗೆ ಸೇರಿದ ಉಗ್ರನಾಗಿರುವ ಈತ ಜಾಗತಿಕ ಭಯೋತ್ಪಾದಕನೆಂದು ಕುಖ್ಯಾತನಾದ ಹಫೀಜ್‌ ಅಬ್ದುಲ್‌ ರೌಫ್‌ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಈತನ ಸಾವಿಗೆ ಪಾಕ್‌ ಸೇನೆಯ ಲೆಫ್ಟಿನೆಂಟ್‌ ಜನರಲ್‌ ಮತ್ತು ಪಂಜಾಬ್‌ ಪೊಲೀಸ್‌ ಐಜಿ ಹಾಜರಾಗಿದ್ದರು.

ಹಫೀಜ್‌ ಮುಹಮ್ಮದ್‌ ಜಮೀಲ್‌ ಜೈಷ್‌ ಎ ಮುಹಮ್ಮದ್‌ ಸಂಘನೆಯ ಸದಸ್ಯ. ಈತ ಉಗ್ರ ಮೌಲಾನಾ ಮಸೂದ್‌ ಅಝರ್‌ ನ ಮೊದಲನೇ ಅಕ್ಕನ ಗಂಡ.

ಮೊಹಮ್ಮದ್‌ ಯೂಸುಫ್‌ ಅಝರ್‌ ಜೈಷ್‌ ಎ ಮೊಹಮ್ಮದ್‌ ಉಗ್ರ. ಈತನೂ ಸಹ ಮೌಲಾನಾ ಮಸೂದ್‌ ಅಝರ್‌ ನ ಭಾವ.ಐಸಿ-814 ಹೈಜಾಕಿಂಗ್‌ ಪ್ರಕರಣದಲ್ಲಿ ಭಾರತದಲ್ಲಿ ವಾಂಟೆಡ್‌.

ಖಾಲಿದ್‌ ಅಲಿಯಾಸ್‌ ಅಬು ಆಕಾಶ ಲಷ್ಕರೆ ತೈಬಾದ ಉಗ್ರ. ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರ ದಾಳಿಗಳ ರೂವಾರಿ. ಅಕ್ರಮ ಶಸ್ತ್ರಾಸ್ತ್ರ ಸಾಗಣೆ ಪ್ರಕರಣದಲ್ಲಿ ಆಫ್ಗಾನಿಸ್ತಾನದಲ್ಲಿಯೂ ಸಹ ವಾಂಟೆಡ್‌. ಫೈಸಲಾಬಾದ್‌ ನಲ್ಲಿ ನಡೆದ ಈತನ ಅಂತ್ಯಸಂಸ್ಕಾರದ ವೇಳೆ ಪಾಕ್‌ ನ ಹಿರಿಯ ಸೇನಾಧಿಕಾರಿಗಳು ಹಾಗೂ ಫೈಸಲಾಬಾದ್‌ ನ ಡೆಪ್ಯುಟಿ ಕಮಿಷನರ್‌ ಭಾಗಿಯಾಗಿದ್ದರು.

ಮೊಹಮ್ಮದ್‌ ಹಸ್ಸನ್‌ ಖಾನ್‌ ಜೈಷ್‌ ಎ ಮುಹಮ್ಮದ್‌ ಸಂಘಟನೆಯ ಉಗ್ರ. ಪಿಒಕೆ ಭಾಗದ ಜೈಷ್‌ ಎ ಮುಹಮ್ಮದ್‌ ಸಂಘಟನೆಯ ಕಮಾಂಡರ್‌ ಮಫ್ತಿ ಅಸ್ಘರ್‌ ಖಾನ್‌ ಕಾಶ್ಮೀರಿಯ ಮಗ. ಜಮ್ಮು ಕಾಶ್ಮೀರದಲ್ಲಿ ಉಗ್ರರನ್ನು ನೆಲೆಯೂರಿಸುವ ಚಟುವಟಿಕೆಯಲ್ಲಿ ಈತ ಪ್ರಮುಖ ಪಾತ್ರ ವಹಿಸುತ್ತಿದ್ದ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!