ಗೋಕಾಕ : ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸೇಡು ತೀರಿಸಿಕೊಳ್ಳಲು ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ‘ಆಪರೇಷನ್ ಸಿಂಧೂರ್’ ಬಗ್ಗೆ ಇಡೀ ವಿಶ್ವಕ್ಕೆ ಮಾಹಿತಿ ವಿವರಿಸಿದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಸೊಸೆ ಕರ್ನಲ್ ಸೋಫಿಯಾ ಖುರೇಷಿಯನ್ನ ಇವತ್ತು ಇಡೀ ದೇಶಕ್ಕೆ ಹೆಮ್ಮೆ ಪಡುವಂತಾಗಿದೆ.

ಇಂತಹ ವೀರ ದಿಟ್ಟ ಮಹಿಳೆಗೆ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೋಳಿಯವರು ಕರ್ನಲ್ ಸೋಫಿಯಾ ಖುರೇಷಿಯ ಮಾವ ಗೌಸಸಾಬ ಬಾಗೆವಾಡಿಗೆ ಶಾಲು ಹೊದಿಸಿ ಸತ್ಕರಿಸಿ ಸನ್ಮಾನಿಸಿ ನಿಮ್ಮ ಸೊಸೆಯಿಂದ ಇವತ್ತು ಗೋಕಾಕ ತಾಲೂಕಿಗೆ ಹೆಮ್ಮೆ ಬಂದಿದೆ,ಮುಂದೆ ಇದೆ ರೀತಿ ದೇಶ ಸೇವೆ ಮಾಡಲಿ ಎಂದು ಹರಸಿದರು.
ಇನ್ನು ಕೊಣ್ಣೂರಲ್ಲಿರುವ ಕರ್ನಲ್ ಸೋಫಿಯಾ ಖುರೇಷಿ ಮಾವನ ಮನೆಗೆ ತೆರಳಿ ಸತೀಶ ಜಾರಕಿಹೋಳಿ ಪೌಂಢೇಷನ್ ವತಿಯಿಂದ ಸದಸ್ಯರುಗಳು ಕೇಕ್ ಕಟ್ ಮಾಡಿ ಹೂ ಹಾರಿಸಿ ಖುರೇಷಿ ಮೆಡಮಗೆ ಜೈಕಾರ ಕೂಗಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಿಯಾಜ ಚೌಗಲಾ, ಖಾಜಿ, ಇಮಾಮ್ ಅಂಡಗಿ, ಜುಬೇರ, ಸೇರಿದಂತೆ ಇನ್ನೂಳಿದವರು ಉಪಸ್ಥಿತರಿದ್ದರು.
ವರದಿ:ಮನೋಹರ ಮೇಗೇರಿ




