ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮಸಾಗರ ಗ್ರಾಮದ ತೇರೆದ ಬಸವಣ್ಣ ದೇವಾಲಯದಲ್ಲಿ ನರೇಗಾ ಕೂಲಿ ಕಾರ್ಮಿಕರು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಸೈನಿಕರಿಗೆ ದೇವರು ಬಲ ತುಂಬಲಿ ಎಂದು ತೆರೆದ ಬಸವೇಶ್ವರರಿಗೆ ವಿಶೇಷ ಅಭಿಷೇಕ ಮಾಡಿ ಪ್ರಾರ್ಥಿಸಿದರು.
ಪಹಲ್ಯಾಮ್ ದಾಳಿಯಲ್ಲಿ ಅಮಾಯಕರ ಬಲಿ ಪಡೆದ ಮಹಿಳೆಯರ ಸಿಂದೂರ್ ಕಿತ್ತೊಕೊಂಡ ಹೆಡೆಮುರಿ ಕಟ್ಟುತ್ತಿರುವ ವೀರಸೈನಿಕರಿಗೆ ದೇವರು ಶಕ್ತಿ ತುಂಬಲಿ ಎಂದು ಕೂಲಿ ಕಾರ್ಮಿಕರು ಕೆಲಸದ ಬಳಿಕ ವಿಶೇಷ ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥಿಸಿದರು ಗ್ರಾಪಂ ಸಿಬ್ಬಂದಿ ಮಾಂತಯ್ಯ ಕೊಮಾರಿ, ಕೂಲಿ ಕಾರ್ಮಿಕರಾದ ಮೈಬೂಬ, ರಂಜಾನಬಿ ಕೂಡ್ಲೆಪ್ಪ ಹಡಪದ, ಧರ್ಮಕುಮಾರ ಕಬ್ಬರಗಿ, ತಿಪ್ಪವ್ವ ಕೃಷ್ಣಪ್ಪ ಬಂಡರಗಲ್, ಚಂದ್ರು, ಶ್ರೀಕಾಂತ ಕಂದಗಲ್, ಶಿವುಕುಮಾರ ಬಿಂಗಿ ಸೇರಿದಂತೆ ಕೂಲಿ ಕಾರ್ಮಿಕರು ಹಾಜರಿದ್ದರು.
ವರದಿ: ಶಿವಕುಮಾರ ಕೆಂಭಾವಿಹಿರೇಮಠ




