ಬೆಳಗಾವಿ: ಈಚೆಗೆ ಜರುಗಿದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉತ್ತಮ ಸಾಧನೆ ತೋರಿದ್ದು, ಶಾಲೆಯ ವಿದ್ಯಾರ್ಥಿಗಳನ್ನು ಕಿತ್ತೂರ ಶಾಸಕರಾದ ಬಾಬಾಸಾಹೇಬ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರೌಢಶಾಲೆಯ ಸೋಮಲಿಂಗಪ್ಪ ಫಕೀರಪ್ಪ ಖಾನರ ಶೇ. 78.08 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನಗಳಿಸಿದ್ದಾರೆ. ವೀರನಗೌಡ ಚನಬಸಪ್ಪಾ ದೊಡ್ಡಗೌಡರ ಶೇ. 75.36 ಅಂಕಗಳನ್ನು ಗಳಿಸುವ ಮೂಲಕ ದ್ವಿತೀಯ ಸ್ಥಾನ, ಹಾಗೂ ಶೇ 75.36 ಅಂಕಗಳನ್ನೇ ಪಡೆದಿರುವ ವಿಕಾಸ ವೀರಪ್ಪ ಜ್ಯೋತಿ ಕೂಡ ಎರಡನೇ ಸ್ಥಾನ ಪಡೆದರು. ಅಕ್ಷತಾ ಗಿರಿದರ ಹಣ್ಣಿಕೇರಿ ಶೇ 66.08 ಅಂಕ ಪಡೆದು ತೃತೀಯ ಸ್ಥಾನಗಳಿಸಿದ್ದಾರೆ.
ಅಭಿನಂದನೆ: ಈ ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಬೆನ್ನೆಲುಬಾಗಿ ನಿಂತ ಮುಖ್ಯೋಪಾಧ್ಯಾಯರು ಹಾಗೂ ಎಲ್ಲ ಶಿಕ್ಷಕರನ್ನು ಶಾಲಾ ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.




