Ad imageAd image

ಸ್ನಾತಕೋತ್ತರ ಪದವಿ ಪರೀಕ್ಷಾ ಶುಲ್ಕ ಕಡಿತಗೊಳಿಸಿ ಡಿ ವಿ ಪಿ ಮನವಿ

Bharath Vaibhav
ಸ್ನಾತಕೋತ್ತರ ಪದವಿ ಪರೀಕ್ಷಾ ಶುಲ್ಕ ಕಡಿತಗೊಳಿಸಿ ಡಿ ವಿ ಪಿ ಮನವಿ
WhatsApp Group Join Now
Telegram Group Join Now

ಸಿಂಧನೂರು:ಮೇ 13 ರಂದು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಸಮಿತಿ ಸಿಂಧನೂರು ವತಿಯಿಂದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರು ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಕಡಿತಗೊಳಿಸುವ ಕುರಿತು ಮನವಿ ನೀಡಲಾಯಿತು ಎಂದು ದುರುಗೇಶ್ ಕಲ್ಮಂಗಿ ತಿಳಿಸಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರ ಮುಖಾಂತರ ಆದಿ ಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರು ಕುಲಪತಿಗೆ ಮನವಿ ಸಲ್ಲಿಸಿ ಅವರು ಮಾತನಾಡಿ
ಈ ವಿಶ್ವವಿದ್ಯಾಲಯಕ್ಕೆ ಒಳಪಡುವ ಖಾಸಗಿ ಕಾಲೇಜುಗಳು ಮನಬಂದಂತೆ ಪರೀಕ್ಷಾ ಶುಲ್ಕವನ್ನು ವಸೂಲಿ ಮಾಡುತ್ತಿದ್ದು ಇದರಿಂದಾಗಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲಾಗದೆ ಶಿಕ್ಷಣವನ್ನು ಮೊಟಕುಗೊಳಿಸುವ ಆತಂಕದಲ್ಲಿದ್ದು ಅದರಿಂದಾಗಿ ಖಾಸಗಿ ಕಾಲೇಜುಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಇಲ್ಲದೆ ಹೋದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ತಮ್ಮ ವಿಶ್ವವಿದ್ಯಾಲಯದ ಮುಂದೆ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ . ದಲಿತ ವಿದ್ಯಾರ್ಥಿ ಪರಿಷತ್ತು ತಾಲೂಕ ಅಧ್ಯಕ್ಷ ದುರುಗೇಶ್ ಕಲ್ಮಂಗಿ ಉಪಾಧ್ಯಕ್ಷ ಶರಣಬಸವ ಕಲ್ಮಂಗಿ ವಿರುಪಾಕ್ಷಿ ಸಾಸಲಮರಿ ಉಮೇಶ್ ಸುಕಲಪೇಟೆ ವಿದ್ಯಾರ್ಥಿಗಳಾದ – ಮಹೇಶ್ ನಾಯಕ್ ವೆಂಕನಗೌಡ ಸಂತೋಷ್ ರಮೇಶ ಸಹನಾ ನೇತ್ರ ಪೂಜಾ ಪೂರ್ಣಿಮಾ ಶಿಲ್ಪ ಮಹೇಶ್ವರಿ ಇನ್ನು ಅನೇಕರಿದ್ದರು.

ವರದಿ:ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!