ಗೋಕಾಕ : ನಗರದಲ್ಲಿ ಮಳೆಯ ಅವಾಂತರದಿಂದ ಭಾರೀ ಮಳೆಗೆ ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ವ್ಯಕ್ತಿಯೊರ್ವ ಕೊಚ್ಚಿಹೋದ ಘಟನೆ ಗೋಕಾಕ ನಗರದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಗೋಕಾಕ ನಗರದಲ್ಲಿ ಸುರಿದ ಧಾರಾಕಾರ ಮಳೆಯ ಕಾರಣಕ್ಕೆ ಚರಂಡಿಗಳು ಮಳೆ ನೀರಿನಿಂದ ತುಂಬಿ ಹರಿಯುತಿದ್ದಾಗ ಗೊಲ್ಲರ ಓಣಿಯ ನಿವಾಸಿ ಕಾಶಪ್ಪ ಶಿರಟ್ಟಿ (52) ವರ್ಷ ವೃದ್ದ ಕಾಲು ಜಾರಿ ಚರಂಡಿಗೆ ಬಿದ್ದು ಕೊಚ್ಚಿ ಹೋಗಿದ್ದಾನೆ.
ಸುದ್ದಿ ತಿಳಿದ ನಗರಸಭೆಯ ಅಧಿಕಾರಿಗಳು, ಶಹರ ಪೋಲಿಸ್ ಪೋಲಿಸ್ ಠಾಣೆಯ ಪಿಎಸ್ಐ ಕೆ,ವಾಲಿಕಾರ ಹುಡುಕಾಟ ನಡೆಸಿದ್ದಾರೆ.
ನಗರಸಭೆಯ ಅಧಿಕಾರಿಗಳು ಜೆಸಿಬಿಯಿಂದ ಪುಟಪಾತ ತೆರವುಗೊಳಸಲಿಕ್ಕೆ ಮುಂದಾಗಿದ್ದು ಕೊಚ್ಚಿ ಹೊದ ವ್ಯಕ್ತಿಗೆ ಹುಡುಕಾಟ ನಡಸಿದ್ದಾರೆ.
ಗೋಕಾಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಶೋಧ ಕಾರ್ಯ ಮುಂದು ವರೆದಿದೆ.
ವರದಿ : ಮನೋಹರ ಮೇಗೇರಿ




