Delivery agent : ಗಂಡ ಹೆಂಡತಿಯ ದಾಂಪತ್ಯ ಜೀವನದಲ್ಲಿ ವಿಧಿಯ ಹೋದ ಆಟದಿಂದ ಯಾರಾದರೂ ಒಬ್ಬರು ಕೊನೆಯುಸಿರೆಳದಾಗ ಒಬ್ಬಂಟಿಯಾದ ಸಂಗಾತಿಯ ಜೀವನವು ತುಂಬಾ ಶೋಚನೀಯವಾಗುತ್ತದೆ. ಅದಾಗ್ಯೂ, ಅನೇಕ ಸಂದರ್ಭಗಳಲ್ಲಿ, ಹೆಂಡತಿ ಸತ್ತಾಗ, ಗಂಡ ಮರುಮದುವೆ ಆಗುತ್ತಾನೆ, ಮನೆಯ ಜವಾಬ್ದಾರಿಗಳ ಜೊತೆಗೆ ಮೊದಲ ಹೆಂಡತಿಯ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನ ಎರಡನೇ ಹಂಡತಿಗೆ ವರ್ಗಾಯಿಸಲಾಗುತ್ತದೆ.
ಆದರೆ, ಗ್ರಿ, ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುವ ಈ ವ್ಯಕ್ತಿ ವಿಭಿನ್ನ ಪತ್ನಿ ಸತ್ತರೂ ಮತ್ತೊಂದು ಮದುವೆಯಾಗದೇ ತಮ್ಮ ಎರಡು ವರ್ಷದ ಮಗಳನ್ನ ನೋಡಿಕೊಳ್ಳುತ್ತಿರುವ ಈ ಡೆಲಿವರಿ ಏಜೆಂಟಿನ ಮನಕಲಕುವ ಕನ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕತೆ ಸಾವಿರಾರು ಜನರ ಹೃದಯಗಳನ್ನು ಮುಟ್ಟಿದ.
ಪಂಕಜ್ ಗುರುಗ್ರಾಮದ ಡೆಲಿವರಿ ಏಜೆಂಟ್. ಅವರ ಪತ್ನಿಯ ಮರಣದ ನಂತರ, ಅವರ ಎರಡು ವರ್ಷದ ಮಗಳು ಮನ್ ಮುನ್ ತಾಯಿಯಿಲ್ಲದ ತಬ್ಬಲಿಯಾದಳು. ಆದರೆ, ಪಂಕಜ್ ತನ್ನ ಮಗುವನ್ನು ಒಂಟಿಯಾಗಿ ಬಿಡಲಿಲ್ಲ. ತಾವೇ ಸ್ವತಃ ತಮ್ಮ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ. ತಮ್ಮ ಮಗಳು ತಾನ್ ತುನ್ ಜೊತೆ ಡೆಲಿವರಿ ಕೆಲಸವನ್ನು ಸಹ ಮಾಡುತ್ತಿದ್ದಾರೆ. ಮಗಳನ್ನು ನೋಡಿಕೊಳ್ಳಲು ಬೇರೆ ಯಾರೂ ಇಲ್ಲದ ಕಾರಣ ಮತ್ತು ಅವರ ಹಿರಿಯ ಮಗ ಸಂಜೆ ತರಗತಿಗಳಿಗೆ ಹಾಜರಾಗುವುದರಿಂದ ಪಂಕಜ್‌ಗೆ ಬೇರೆ ದಾರಿ ಕಾಣಲಿಲ್ಲ. ಹೀಗಾಗಿ ಡೆಲಿವರಿ ಕೆಲಸದೊಂದಿಗೆ ತಮ್ಮ ಮಗಳನ್ನು ತಾವ ನೋಡಿಕೂಳ್ಳುತ್ತಿದ್ದಾರೆ.
ಅಂದಹಾಗೆ, ಗುರುಗ್ರಾಮ್ ಮೂಲದ ಸಿಇಒ ಮಾಯಾಂಕ್ ಅಗರ್ವಾಲ್ ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಡೆಲಿವರಿ ಏಜೆಂಟ್ ಪಂಕಜ್ ಬೆಳಕಿಗೆ ಬಂದರು.




