ಮುಂಬೈ: ಟೆಸ್ಟ್ ಕ್ರಿಕೆಟ್ನಿಂದ ದಿಢೀರ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ವೃಂದಾವನಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.
ಶ್ರೀಕೃಷ್ಣತನ್ನ ಬಾಲ್ಯವನ್ನು ಕಳೆದ ಪವಿತ್ರ ಪಟ್ಟಣ ವೃಂದಾವನಕ್ಕೆ ಕೊಹ್ಲಿ ಮತ್ತು ಅನುಷ್ಕಾ ಭೇಟಿ ನೀಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೃಂದಾವನದಲ್ಲಿ, ವಿರಾಟ್ ಮತ್ತು ಅನುಷ್ಕಾ ಸಂತ ಪ್ರೇಮಾನಂದ ಗೋವಿಂದ ಶರಣ್ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು.
ವಿರುಷ್ಕಾ ದಂಪತಿ ಈ ಹಿಂದೆ ಕೆಲವು ವರ್ಷಗಳಿಂದ ಹಲವಾರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ವರ್ಷದ ಜನವರಿಯಲ್ಲಿ, ವಿರಾಟ್, ಅನುಷ್ಕಾ ಶರ್ಮಾ ಮತ್ತು ಅವರ ಮಕ್ಕಳು ಪ್ರೇಮಾನಂದ್ ಜಿ ಮಹಾರಾಜರ ಆಶೀರ್ವಾದ ಪಡೆಯಲು ವೃಂದಾವನಕ್ಕೆ ಭೇಟಿ ನೀಡಿದರು. ಅದರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
2023 ರಲ್ಲಿ ದಂಪತಿಗಳು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದಕ್ಕೂ ಮೊದಲು, ಈ ಜೋಡಿ ಉತ್ತರಾಖಂಡದ ಕೈಂಚಿ ಧಾಮ್ನಲ್ಲಿರುವ ನೀಮ್ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು.




