ಅಥಣಿ : ಮುಂಗಾರು ಮೊದಲ ಮಳೆಯ ಆರ್ಭಟ ಶುರುವಾಗಿದ್ದು, ತಾಲೂಕಿನ ಹಲವು ಕಡೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ.
ಅಥಣಿ ಪಟ್ಟಣ ಸೇರಿದಂತೆ ತಾಲೂಕಿನ ಕೋಹಳ್ಳಿ, ಅಡಹಳ್ಳಿ ಗ್ರಾಮಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು ತಗ್ಗು ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಸತತ ಎರಡು ಗಂಟೆಗಳ ಕಾಲ ಗುಡುಗು ಮಿಂಚು ಸಹಿತ ಸುರಿದ ಭಾರಿ ಮಳೆಗೆ ಸಣ್ಣ ನಿರಾವರಿ ಇಲಾಖೆಯಿಂದ 7 ಕೆರೆ ತುಂಬುವ ಯೋಜನೆಯ ಪೈಪ್ ಲೈನ್ ಬಾರಿ ಮಳೆಯಿಂದ ಮಣ್ಣು ಕೊರೆದು ಹೋಗಿ ಮೇಲೇಕ್ಕೆದ್ದಿದ್ದು. ಹೊಲ ಗದ್ದೆಗಳ ಬೃಹತ್ ಬದುಗಳು ಒಡೆದು ಹೋಗಿವೆ. ಬಿರು ಬೇಸಿಗೆಯಲ್ಲಿ ಸುರಿದ ಭಾರಿ ಮಳೆಗೆ ರೈತರು ಫುಲ್ ಖುಷ್ ಆಗಿದ್ದಾರೆ.
ವರದಿ : ಅಜಯ್ ಕಾಂಬಳೆ




