ಅರಸೀಕೆರೆ: ತಾಲ್ಲೋಕಿನ ಹಾರನಹಳ್ಳಿ ಗ್ರಾಮದ ಸೈನಿಕ ಡಾಕ್ಟರ್ ಪರಮೇಶ್ ರವರಿಗೆ ಭಾರತದ ಗಡಿಭದ್ರತಾ ಪಡೆಯಿಂದ ತುರ್ತು ಸಂದೇಶದ ಹಿನ್ನೆಲೆಯಲ್ಲಿ ಇಂದು ಶ್ರೀ ನಗರ ಕ್ಕೆ ಸೋಮವಾರ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ ನಮ್ಮ ನಾಡು ನಮ್ಮ ದೇಶದ ಗೌರವ ಸಾಧಿಸಲು ನಾನು ಕರೆಗೆ ಸ್ಪಂದಿಸಿ ಹೋರಟಿದ್ದೆನೆ. ನನಗೆ ನನ್ನ ದೇಶ ಮುಖ್ಯ ಎಂದು ಭಾರತ್ ಮಾತಾ ಕೀ ಜೈ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲ್ಲೋಕು ಜೆಡಿಎಸ್ ಮುಖಂಡ ಎನ್, ಆರ್, ಸಂತೋಷ್ ರವರು ಗಡಿಭದ್ರತೆಗೆ ತೆರಳುತ್ತೀರುವ ಯೋದ ಪರಮೇಶ್. ರವರಿಗೆ ಹಣೆಗೆ ತಿಲಕ ಇಡುವುದರ ಮೂಲಕ ಸನ್ಮಾನಿಸಿ ಗೌರವಿಸಿ ಬಿಳ್ಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಎನ್,ಆರ್, ಸಂತೋಷ್ ನಮ್ಮ ದೇಶಕ್ಕಾಗಿ ಸಾವಿರಾರು ಜನ ಹುತಾತ್ಮರಾಗಿ ವೀರ ಸ್ವರ್ಗ
ಸೇರಿದ್ದಾರೆ. ಆದರೆ ಪರಮೇಶ್ ಈ ಹೋರಾಟ ದಲ್ಲಿ ಗೆಲುವು ಸಾಧಿಸಿ ಮತ್ತೆ ತಮ್ಮ ಜನ್ಮ ಭೊಮಿಗೆ ವಾಪಸ್ ಬರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಡಿ.ಎಂ.ಕುರ್ಕೆಜಯದೆವ್,ಕಾಟೀಕೆರೆ ಮೋಹನ್ ಕುಮಾರ್ ,ಮಾಜಿ ನಗರಸಭಾ ಸದಸ್ಯ ಹರ್ಷವರ್ಧನ,,ಬಕ್ಕಪ್ಪ ಶಿವು,ವಕೀಲ ಶಿವರಾಜ್,ಸುನೀಲ್ ಯೋದ ಪರಮೇಶ್ ರವರ ಹೆಂಡತಿ ರೋಪ, ಮಕ್ಕಳಾದ ಪುನೀತ್ ವಿಶ್ವಕರ್ಮ, ದೀಪಿಕಾ ವಿಶ್ವಕರ್ಮ, ಇತರರು ಹಾಜರಿದ್ದರು.
ವರದಿ: ರಾಜು ಅರಸಿಕೆರೆ




