ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಉದ್ಯಾನವನ(ಪಾರ್ಕ್) ಮತ್ತು ಆಟದ ಮೈದಾನದಲ್ಲಿ ವಾಯುವಿಹಾರಕ್ಕೆ ಬರುವ ವೃದ್ಧರಿಗೆ, ಆಟಗಾರರಿಗೆ ಮತ್ತು ಇತರರ ದೃಷ್ಟಿಯಿಂದ ಕ್ಷೇತ್ರದಲ್ಲಿ ಉದ್ಯಾನವನದಲ್ಲಿ ಮತ್ತು ಆಟದ ಮೈದಾನದಲ್ಲಿ ಶೌಚಾಲಯ, ಸ್ನಾನದ ಗೃಹ ಇಲ್ಲದೇ ಇರುವ ಜಾಗಗಳನ್ನು ಗುರುತಿಸಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದೇವೆ ಎಂದು ಕ್ಷೇತ್ರದ ಶಾಸಕ ಎಸ್ ಮುನಿರಾಜು ಹೇಳಿದರು.
ಅವರು ಎಂಇಐ ಆಟದ ಮೈದಾನದಲ್ಲಿ ನೂತನವಾಗಿ ನಿರ್ಮಿಸಿರುವ ಶೌಚಾಲಯ ಮತ್ತು ಸ್ನಾನದ ಕೊಠಡಿಯನ್ನು ಶಾಸಕ ಎಸ್ ಮುನಿರಾಜು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್, ದಾಸರಹಳ್ಳಿ ವಲಯದ ಆಯುಕ್ತ ಡಾ.ನವೀನ್ ಕುಮಾರ್, ಸಹಾಯ ಇಂಜಿನಿಯರ್ ಮಂಜೇಗೌಡ ಕೆ. ಮತ್ತು ಬಿಬಿಎಂಪಿ ಸಿಬ್ಬಂದಿ ವೃಂದದವರು, ವಾರ್ಡ ಬಿಜೆಪಿ ಅಧ್ಯಕ್ಷ ಮಧುಸೂದನ್, ಮಾಜಿ ಅಧ್ಯಕ್ಷ ಬಿ.ಎಂ ಕೃಷ್ಣ ಸ್ಥಳೀಯ ಬಿಜೆಪಿ ಮುಖಂಡರಾದ ಗುರುಪ್ರಸಾದ್, ಆನಂದ್ ರೆಡ್ಡಿ, ಪಿ.ಹೆಚ್ ರಾಜು ಶ್ರೇಷ್ಠ ಗುತ್ತಿಗೆದಾರ ಮಹಾದೇವ ರೆಡ್ಡಿ,ಸೇರಿದಂತೆ ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




