ನಿಪ್ಪಾಣಿ : ಆಧುನಿಕ ತಂತ್ರಜ್ಞಾನದ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು ಸಂಯಮ ದೊಂದಿಗೆ ಉನ್ನತ ದರ್ಜೆಯ ಬೋಧನೆ, ಕ್ರೀಡೆ, ಕಲೆ, ಜ್ಞಾನದ ಜ್ಯೋತಿ ಬೆಳಗುವ, ಕಲಾ ಕೌಶಲ್ಯದ ಶಿಕ್ಷಕರ ಬೋಧನೆಯಿಂದ ಮಾತ್ರ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನಲ್ಲಿಯ ಪ್ರತಿಭೆ ಪ್ರದರ್ಶಿಸಲು ಸಾಧ್ಯವೆಂಬುದಕ್ಕೆ ಸದಲಗಾ ಪಟ್ಟಣದ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಉತ್ತಮ ಉದಾಹರಣೆ. ಎಂದು ಸದಲಗಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ರಾವಸಾಹೇಬ ಪಾಟೀಲ ತಿಳಿಸಿದರು.
ಅವರು ಸದಲಗಾ ಪಟ್ಟಣದ ಆಂಗ್ಲ ಮಾಧ್ಯಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು ಇದೇ ಸಂದರ್ಭದಲ್ಲಿ ಪ್ರಾಂಶುಪಾಲ ಎಚ್ಎನ್ ಸಯ್ಯದ್ ಹಾಗೂ ಶಿಕ್ಷಕ ಪ್ರಶಾಂತ ಪಾಟೀಲ್ ಮಾತನಾಡಿ ಹಿರಿಯ ಶಿಕ್ಷಣ ಪ್ರೇಮಿ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಪಾಟೀಲ್ ಮಾರ್ಗದರ್ಶನದಲ್ಲಿ ಆಡಳಿತ ಮಂಡಳಿಯ ವಿಶ್ವಾಸ ಒಮ್ಮತದ ನಿರ್ಧಾರದೊಂದಿಗೆ ಸದಲಗಾ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತಿದ್ದು ಕಳೆದ ಆರು ವರ್ಷಗಳಿಂದ ಶೇ.100ರಷ್ಟು ಫಲಿತಾಂಶ ಬಂದಿದೆ.
ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯದೊಂದಿಗೆ ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸಲು ಒತ್ತು ನೀಡುತ್ತಿರುವುದರಿಂದ ಕೇಂದ್ರಕ್ಕೆ ಕಳೆದ 6.ವರ್ಷಗಳಿಂದ ನೂರರಷ್ಟು ಪಲಿತಾಂಶ ಬಂದಿದ್ದು ಶಾಲೆಯ ಪ್ರತೀಕ ಯಾದವ ಪ್ರಥಮ ಸ್ಪೂರ್ತಿ ಜಗತಾಪ ದ್ವಿತೀಯ ಗುರುಪ್ರಸಾದ್ ಗಡಕರಿ ತೃತೀಯ ಕ್ರಮಾಂಕದಲ್ಲಿ ಪಾಸಾಗಿದ್ದು ಸಂಸ್ಥೆಯ ಆಡಳಿತ ಮಂಡಳಿಗೆ, ಪಾಲಕರಿಗೆ ಶಿಕ್ಷಕರಿಗೆ ಕೀರ್ತಿ ತಂದಿದ್ದಾರೆ ಎಂದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಅಶೋಕ ಉಗಾರೆ ಡಾಕ್ಟರ್ ಜ್ಯೋತಿ ಚಿಂಚನಿಕರ, ರಮೇಶ ಮಾನೆ ಶರದ ಲಡಗೆ ಸಂಜಯ ಕೋರೆ, ಭರತ ಪಾಟೀಲ, ಶೀತಲ ಪ್ರಧಾನ ಸೇರಿದಂತೆ ಶಿಕ್ಷಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ : ಮಹಾವೀರ ಚಿಂಚಣೆ




