ಅರಸೀಕೆರೆ: ದೇಶದ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ ದೇವೇಗೌಡರ 93ನೇ ಹುಟ್ಟುಹಬ್ಬವನ್ನು ಅರಸೀಕೆರೆ ನಗರದ ವಿಘ್ನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಲಾಯಿತು ನಂತರ ನಗರದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಅರಸೀಕೆರೆ ತಾಲ್ಲೂಕು ಜೆಡಿಎಸ್ ಮುಖಂಡ ಹೊಸೂರು ಗಂಗಾಧರ್ ಹಾಗೂ ರಾಂಪುರ ಶೇಖರಪ್ಪ ನೇತ್ರತ್ವದಲ್ಲಿ ನಡೆದ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮ
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಹೊಸೂರು ಗಂಗಾಧರ್ ದೇಶ ಕಂಡ ಅಪ್ರತಿಮ ರೈತ ನಾಯಕ ಹಾಸನ ಜಿಲ್ಲೆಯಿಂದ ಗೆದ್ದು ಕರ್ನಾಟಕ ರಾಜ್ಯದಿಂದ ಏಕ ಮಾತ್ರ ಪ್ರಧಾನಮಂತ್ರಿಯಾಗಿ ಆಡಳಿತ ಮಾಡಿದ ಎಚ್ ಡಿ ದೇವೇಗೌಡ ಅವರ ಜನ್ಮದಿನವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ನೂರಾರು ವರ್ಷ ಆರೋಗ್ಯವಾಗಿ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು .
ಜೆಡಿಎಸ್ ಮುಖಂಡ ರಾಂಪುರ ಶೇಖರಪ್ಪ ಮಾತನಾಡಿ ಇಂದು ಅರಸೀಕೆರೆ ತಾಲ್ಲೂಕು ಜೆಡಿಎಸ್ ಪಕ್ಷದಿಂದ ಮತ್ತು ದೇವೇಗೌಡರ ಅಭಿಮಾನಿಗಳ ನೇತ್ರತ್ವದಲ್ಲಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಆಸ್ಪತ್ರೆಯಲ್ಲಿ ಇದ್ದ ರೋಗಿಗಳಿಗೆ ಹಣ್ಣು ಹಂಪಲನ್ನು ವಿತರಿಸುತಿದ್ದೇವೆ ದೇವೇಗೌಡರ ಗರಡಿಯಲ್ಲಿ ಬೆಳೆದ ಸಾಕಷ್ಟು ಜನ ಮುಖ್ಯಮಂತ್ರಿಗಳಾಗಿ ಸಚಿವರಾಗಿ ಕೇಂದ್ರ ಮಂತ್ರಿಗಳಾಗಿ ಅಧಿಕಾರ ವಹಿಸಿದ್ದಾರೆ ದೇವೇಗೌಡರ ಆಶೀರ್ವಾದ ಇನ್ನು ನಮಗೆಲ್ಲರಿಗೂ ಅಗತ್ಯವಿದೆ ದೇವೇಗೌಡರೇ ಒಂದು ಶಕ್ತಿ ಎಂದರು
ಈ ಸಂದರ್ಭದಲ್ಲಿ ಮಾಜಿ ಎಂ.ಎಲ್.ಎ ಪರಮೇಶ್ವರಪ್ಪ ,ಕುರುಬ ಸಮಾಜದ ಮುಖಂಡರು ಹಾಗೂ ಜೆಡಿಎಸ್ ಮುಖಂಡ ಕೆಂಕೆರೆ ಕೇಶವಮೂರ್ತಿ , ಕುಮಾರಣ್ಣ , ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್ , ರಮೇಶ್ ಮಾರುತಿ ನಗರ, ಲಾಳನಕೆರೆ ಯೋಗೀಶ್ , ನಿರಂಜನ್ , ಸಂತೋಷ್ , ಗಂಡಸಿ ಜೆಡಿಎಸ್ ಮುಖಂಡ ಆಲದ ಹಳ್ಳಿ ಶಂಕರ್ , ಅಶ್ವಥ್ , ವಿಭಿನ್, ಸೇರಿದಂತೆ ದೇವೇಗೌಡರ ಅಭಿಮಾನಿಗಳು ಉಪಸಿತರಿದ್ದರು .
ವರದಿ: ರಾಜು ಅರಸಿಕೆರೆ




