ತುರುವೇಕೆರೆ : ತಾಲ್ಲೂಕಿನ ಕೊಡಗೀಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳ ಉದ್ಘಾಟನೆ, ಗ್ರಾಮ ಪಂಚಾಯ್ತಿ ನೂತನ ಕಟ್ಟಡ, ಗೋದಾಮು ಕಟ್ಟಡ ಹಾಗೂ ಜಲಜೀವನ್ ಮಿಷನ್ ಕಾಮಗಾರಿಗೆ ಶಂಕುಸ್ಥಾಪನೆ ಸೇರಿದಂತೆ ಸುಮಾರು ಒಂದು ಕೋಟಿ 75 ಲಕ್ಷ ರೂಗಳ ಅಭಿವೃದ್ದಿ ಕೆಲಸಗಳಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ಮನೆಮನೆಗೆ ಕೊಳಾಯಿ ಮೂಲಕ ನೀರು ಸರಬರಾಜು ಮಾಡುವ ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ಜಲಜೀವನ್ ಮಿಷನ್ ಮನೆಮನೆಗೆ ಗಂಗೆ ಕಾಮಗಾರಿಗೆ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಈಗಾಗಲೇ ಚಾಲನೆ ನೀಡಿದ್ದು ಕಾಮಗಾರಿ ನಡೆಯುತ್ತಿದೆ. ಈ ದಿನ ಕೊಡಗೀಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಕೆರೆ ಗ್ರಾಮದಲ್ಲಿ ಸುಮಾರು 95 ಲಕ್ಷ ರೂ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದರು.
ಪುಟಾಣಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಹೊಸ ಅಂಗನವಾಡಿ ಕಟ್ಟಡದ ಅಗತ್ಯತೆಯನ್ನು ಮನಗಂಡು ಎನ್.ಆರ್.ಇ.ಜಿ. ಹಾಗೂ ಎಐಡಿಎಫ್ ಯೋಜನೆಯಡಿ ಹಾವಾಳ ಗ್ರಾಮದಲ್ಲಿ 20 ಲಕ್ಷ ವೆಚ್ಚದಲ್ಲಿ ಹಾಗೂ ಜೋಗಿಪಾಳ್ಯ ಗ್ರಾಮದಲ್ಲಿ 10 ಲಕ್ಷ ರೂ ವೆಚ್ಚದ ನೂತನ ಅಂಗನವಾಡಿ ಕಟ್ಟಡವನ್ನು ಉತ್ತಮ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಕೊಡಗೀಹಳ್ಳಿ ಗ್ರಾಪಂನ 15ನೇ ಹಣಕಾಸು ಯೋಜನೆ, ಎನ್.ಆರ್.ಇ.ಜಿ. ಹಾಗೂ ಗ್ರಾಪಂ ನಿಧಿಯಿಂದ ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ಉತ್ತಮ ಸುಸಜ್ಜಿತ ಗ್ರಾಮ ಪಂಚಾಯ್ತಿ ಕಟ್ಟಡ ಹಾಗೂ 13 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಗಿದೆ ಎಂದ ಅವರು, ಗುತ್ತಿಗೆದಾರರು ಗುಣಮಟ್ಟದ ಕಟ್ಟಡ ನಿರ್ಮಾಣ ಮಾಡಬೇಕು, ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ರಸ್ತೆಗಳನ್ನು ಅಗೆದು ಹಾಗೇ ಬಿಡಬಾರದು, ನಿಯಮ ಪಾಲನೆ ಮಾಡಬೇಕು ಎಂದರು.

ಕೊಡಗೀಹಳ್ಳಿ ಗ್ರಾಪಂ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯಲ್ಲಿ ಹಲವು ಅಭಿವೃದ್ದಿ ಕಾಮಗಾರಿಗಳನ್ನು ಶಾಸಕ ಎಂ.ಟಿ.ಕೃಷ್ಣಪ್ಪನವರ ನೇತೃತ್ವದಲ್ಲಿ, ಪಂಚಾಯ್ತಿಯ ಸದಸ್ಯರ ಸಹಕಾರದೊಂದಿಗೆ ನಡೆಸಲಾಗಿದೆ. ಗ್ರಾಮ ಪಂಚಾಯ್ತಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಶಾಸಕರು ಭೂಮಿ ಪೂಜೆ ನೆರವೇರಿಸಿದ್ದು, ಶಾಸಕರ ಅನುದಾನವನ್ನು ಕಟ್ಟಡ ನಿರ್ಮಾಣಕ್ಕೆ ಒದಗಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ರತ್ನಮ್ಮಸಿದ್ದಲಿಂಗಯ್ಯ, ಸದಸ್ಯರಾದ ಆದರ್ಶ, ರವಿಚಂದ್ರ, ಪವಿತ್ರಮಹೇಶ್, ಶೋಭಾಸೀನಾಚಾರ್, ಸೌಭಾಗ್ಯಶಿವಯ್ಯ, ದೇವರಾಜು ಹೆಚ್.ಎನ್., ರಾಜಲಕ್ಷ್ಮೀರಾಘವೇಂದ್ರ, ಶ್ರೀನಿವಾಸ್, ಗಂಗಾಮಣಿರಂಗಪ್ಪ, ದೇವರಾಜು, ರೂಪಜವರಪ್ಪ, ಭವ್ಯಶ್ರೀನಾಗೇಶ್, ಸವಿತಯೋಗೀಶ್, ಮುನಿಸ್ವಾಮಿ, ಜಲಜೀವನ್ ಮಿಷನ್ ಯೋಜನೆಯ ಜೆಇ ರವಿಕುಮಾರ್, ಎನ್.ಆರ್.ಇ.ಜಿ. ಸಹಾಯಕ ನಿರ್ದೇಶಕ ಸುರೇಶ್, ಸಿಡಿಪಿಒ ವೆಂಕಟಪ್ಪ, ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಗೋಪಿನಾಥ್, ಕಾರ್ಯದರ್ಶಿ ಮಂಜಯ್ಯ, ಮೇಲ್ವಿಚಾರಕಿ ಲೀಲಾವತಿ, ಪಂಚಾಯ್ತಿ ಸಿಬ್ಬಂದಿಗಳಾದ ರಂಗನಾಥ್, ರಾಧಿಕಾ, ಗುತ್ತಿಗೆದಾರ ಶ್ರೀನಿವಾಸ್ ಕೆ.ಸಿ., ಮುಖಂಡರಾದ ಮಲಸೀಮೆ ಶ್ರೀನಿವಾಸಗೌಡ, ಕೊಡಗೀಹಳ್ಳಿ ಪಾಲಾಕ್ಷ, ಜೋಗಿಪಾಳ್ಯದ ನಾಗರಾಜ್, ಕರುಣಾಕರ್, ನಾರಾಯಣಪ್ಪ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್,




