ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆಯದ ಜೆ ಜೆ ಎಂ ಪೈಪ್ ಲೈನ್ ಕಾಮಗಾರಿಯು ಹಟ್ಟಿ ಚಿನ್ನದ ಗಣಿ ಪಟ್ಟಣದ ಸರಕಾರಿ ಪ್ರೌಢಶಾಲೆ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ನಡೆಯುತ್ತಿದ್ದು ಫುಟ್ ಬಾತ್ ಅಂಗಡಿ ಮಾಲೀಕರ ಒತ್ತಡಕ್ಕೆ ಮಣಿದ ಗುತ್ತೇದಾರ ತನ್ನ ಮನಸೋ ಇಚ್ಛೆಯಂತೆ ಅಡ್ಡಾದಿಡ್ಡಿ ಯಾಗಿ ಪೈಪ್ ಜೋಡಣೆ ಮಾಡುತ್ತಿರುವುದು ಇದನ್ನು ಗಮನಿಸಿದ ಹಟ್ಟಿಯ ಮುಖಂಡರಾದ ಎನ್ ಸ್ವಾಮಿ ನಾಯ್ಕೋಡಿ ಜೆ ಜೆ ಎಂ ಪೈಪ್ ಲೈನ್ ಕಾಮಗಾರಿ ಗುಡದನಾಳ ರಸ್ತೆಯಿಂದ ಬಂದ ಪೈಪ್ ಲೈನ್ ಕಾಮಗಾರಿ ಹಟ್ಟಿ ಕಂಪನಿ ಕಚೇರಿಯ ಎದುರು ಅರ್ಧಕ್ಕೆ ನಿಲ್ಲಿಸಲಾಗಿದೆ ಹೊಸ ಬಸ್ ನಿಲ್ದಾಣದಿಂದ ಅಡ್ಡದಿಡಿಯಾಗಿ ಪೈಪ್ ಲೈನ್ ಹಾಕಿ ಮುಚ್ಚುವುದನ್ನು ನೋಡಿ ಗುತ್ತಿಗೆದಾರರಿಗೆ ಸರ್ಕಾರದ ನಿಯಮಗಳನ್ನು ಪಾಲನೆ ಮಾಡದೆ ಹಟ್ಟಿ ಚಿನ್ನದ ಗಣಿ ಕ್ಯಾಂಪ್ ಏರಿಯಾದ ರಸ್ತೆ ಪಕ್ಕದಲ್ಲಿರುವ ಫುಟ್ ಬಾತ್ ಅಂಗಡಿ ಮಾಲೀಕರ ಜೊತೆಗೆ ಹಣದ ವ್ಯವಹಾರ ಮಾಡಿಕೊಂಡು ಯಾವ ಅಂಗಡಿಗಳನ್ನು ತೆರವುಗೊಳಿಸದೆ ತನ್ನ ಮನಸ್ಸು ಇಚ್ಛೆಯಂತೆ ಅಳವಡಿಸುತ್ತಿರುವ ದನ್ನು ಏನ್ ಸ್ವಾಮಿ ನಾಯ್ಕೋಡಿ ಪ್ರಶ್ನಿಸಿ ಕುಡಿಯುವ ನೀರು ಯೋಜನೆಯ ಸರ್ಕಾರದ ಆದೇಶ ಪಾಲನೆ ಮಾಡದೆ ನೀವು ನೇರವಾಗಿ ಹಾಕಬೇಕೆಂದು ಗುತ್ತಿಗೆದಾರರಿಗೆ ತರಾಟೆಗೆ ತೆಗೆದುಕೊಂಡರು.
ಯಾರ ಒತ್ತಡಕ್ಕೆ ಮಣಿಯದೆ ಸರಕಾರದ ನಿಯಮದಂತೆ ಜೆ ಜೆ ಎಂ ಪೈಪ್ ಲೈನ್ ನೇರವಾಗಿ ಹಾಕಬೇಕು ಫುಟಬಾತ್ ಮೇಲೆ ನಿರ್ಮಾಣ ಮಾಡಿರುವ ಶೆಡ್ಡುಗಳು ಯಾರಪ್ಪನ ಆಸ್ತಿ ಅಲ್ಲ ಅದು ಹಟ್ಟಿ ಚಿನ್ನದ ಗಣಿ ಕಂಪನಿ ಮತ್ತು ಪಿಡಬ್ಲ್ಯೂಡಿ ಸ್ವತ್ತು ಎಂದು ಶಿವು ನಾಯಕ್ ತಬಲಾಜಿ ಗುತ್ತೇದಾರರಿಗೆ ಎಚ್ಚರಿಸಿದರು ನಿಮಗೆ ಯಾರಾದರೂ ತೊಂದರೆ ನೀಡುತ್ತಿದ್ದಾರೆ ಇಲ್ಲವಾದರೆ ಅವರ ಒತ್ತಡಕ್ಕೆ ಮಣಿಯದೆ ನೀವು ಅಡ್ಡದ್ದಿಡ್ಡಿ ಹಾಕುವುದನ್ನು ಬಿಟ್ಟು ನೇರವಾಗಿ ಹಾಕಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆಗೆ ಸಹಕಾರ ನೀಡಿದ ಹಟ್ಟಿ ಚಿನ್ನದ ಕಂಪನಿಯ ಅಧಿಕಾರಿಗಳು ಮತ್ತು ಅಧಿಸೂಚಿತ ಪ್ರದೇಶದ ಮುಖ್ಯ ಅಧಿಕಾರಿ ಜಗನ್ನಾಥ್ ಸುಮ್ಮನೆ ಕುಳಿತಿರುವುದು ನೋಡಿದರೆ ರಸ್ತೆ ಪಕ್ಕದಲ್ಲಿ ಹಾಕಿರುವ ಫುಟ್ ಬಾತ್ ಅಂಗಡಿ ಮಾಲೀಕರ ಜೊತೆ ಕಮಿಷನ್ ಏನಾದರೂ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಅನುಮಾನ ನಮಗೆ ಇದೆ..?
ಅಧಿಸೂಚಿತ ಪ್ರದೇಶದಲ್ಲಿರುವ ಫುಟ್ ಬಾತ್ ಅಂಗಡಿಗಳನ್ನು ಪೈಪ್ ಲೈನ್ ಕಾಮಗಾರಿಗೆ ಅಡ್ಡವಾಗಿರುವುದರಿಂದ ಅಧಿಸೂಚಿತ ಪ್ರದೇಶದ ಮುಖ್ಯ ಅಧಿಕಾರಿ ಮತ್ತು ಚಿನ್ನದ ಗಣಿ ಕಂಪನಿಯ ಅಧಿಕಾರಿಗಳು ಜೊತೆಗೂಡಿ ಪೈಪ್ ಲೈನ್ ಕಾಮಗಾರಿಗೆ ಅಡ್ಡಿಯಾಗುತ್ತಿರುವ ಫುಟ್ಬಾತ್ ಅಂಗಡಿಗಳನ್ನು ತೆರೆವುಗೊಳಿಸಿ ಕಾಮಗಾರಿ ಪೂರ್ಣ ಮಾಡುವಲ್ಲಿ ಗುತ್ತಿದಾರರಿಗೆ ಸಹಕಾರ ನೀಡಬೇಕೆಂದು ಮತ್ತು ಹಟ್ಟಿ ಕ್ಯಾಪಿನ ರಸ್ತೆ ಪಕ್ಕದ ಫುಟ್ ಬಾತ್ ನಲ್ಲಿ ಪರ್ಮೆಂಟ್ ಆಗಿ ಶೆಡ್ಡುಗಳನ್ನು ಹಾಕಿಕೊಂಡು ಒಂದು ಶೆಡ್ಡಿಗೆ 10ರಿಂದ 15 ಸಾವಿರದವರೆಗೆ ಬಾಡಿಗೆ ಪಡೆಯುತ್ತಿದ್ದು ಮತ್ತು ಕೆಲ ಫುಟ್ಪಾತ್ ಮೇಲೆ ಹಾಕಿರುವ ಶೆಡ್ಡಿನ ಮಾಲೀಕರು ಐದರಿಂದ ಹತ್ತು ಲಕ್ಷದವರೆಗೆ ಆ ಜಾಗದ ಶೆಡ್ಡುಗಳನ್ನು ಮಾರಾಟ ಮಾಡಿದ್ದಾರೆಂದು ಇಲ್ಲಿಯ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ,
ಕೂಡಲೇ ಜೆ ಜೆ ಎಂ ಪೈಪ್ ಕಾಮಗಾರಿಗೆ ಯಾರು ಅಡ್ಡಿಪಡಿಸದೆ ಕಾಮಗಾರಿ ಪೂರ್ತಿಗೊಳ್ಳಲು ಸಹಕಾರ ನೀಡಬೇಕೆಂದು ಸುರೇಶ್ ಗೌಡ ಗುರಿಕಾರ್ ಒತ್ತಾಯಿಸಿದರು. ಸರ್ಕಾರದ ನಿಯಮಗಳ ಪ್ರಕಾರ ಕಾಮಗಾರಿ ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ನಿರ್ಲಕ್ಷ ಮಾಡಿದರೆ ಮುಂದಾಗುವ ಅನಾಹುತಗಳಿಗೆ ಜೆ ಜೆ ಎಂ ಅಧಿಕಾರಿಗಳೇ ನೇರ ಹೊಣೆಗಾರರು ಎಂದು ಸುರೇಶ್ ದಲಿತ ಮುಖಂಡ ಎಚ್ಚರಿಕೆ ನೀಡಿದ್ದಾರೆ.
ಸಂಬಂಧಪಟ್ಟ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ನಿರ್ಲಕ್ಷ ಧೋರಣೆ ಅನುಸರಿಸಿದರೆ ಹೋರಾಟದ ಮೂಲಕ ಬಿಸಿ ಮುಟ್ಟಿಸಲಾಗುವುದೆಂದು ಈ ಮೂಲಕ ಏನ್ ಸ್ವಾಮಿ ನಾಯ್ಕೋಡಿ, ಶಿವು ತಬಲಾಜಿ, ಸುರೇಶ್ ಗೌಡ ಗುರಿಕಾರ್, ಸುರೇಶ್ ದಲಿತ ಮುಖಂಡ, ನಿಂಗಪ್ಪ, ಶಿವು, ಸೇರಿದಂತೆ ಇನ್ನೂ ಅನೇಕ ಮುಖಂಡರು ಒತ್ತಾಯ ಮಾಡಿದರು.
ವರದಿ : ಶ್ರೀನಿವಾಸ ಮಧುಶ್ರೀ




