ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ ತಮ್ಮ 22ನೇ ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೇಟ್ ಮಾಡಿದ್ದಾರೆ. ದಂಪತಿ ಕೇಕ್ ಕಟ್ ಮಾಡಿ ಸಂಭ್ರಮಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ದರ್ಶನ್ ಪತ್ನಿಯ ಇಷ್ಟದ ಹಾಡು ಮುದ್ದು ರಾಕ್ಷಸಿ ಹಾಡಿಗೆ ಸ್ಟೆಪ್ಸ್ ಹಾಕಿದ್ದು, ವಿಡಿಯೋ ವೈರಲ್ ಆಗಿದೆ. ಅಲ್ಲದೇ ಹಾಡು ಹಾಡಿ ದರ್ಶನ್ ಫುಲ್ ಜಾಲಿ ಮಾಡಿದ್ದಾರೆ. ದಂಪತಿ ಜೊತೆಗೆ ಅವರ ಆಪ್ತರೂ ಇದ್ದರು.
ಬಾಲಿಯಲ್ಲಿ ನಟ ಚಿಕ್ಕಣ್ಣ ಸೇರಿದಂತೆ ಆಪ್ತ ಬಳಗದ ಜೊತೆ ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೇಟ್ ಮಾಡಲಾಗಿದೆ. ಕಳೆದ ವಿವಾಹ ವಾರ್ಷಿಕೋತ್ಸವನ್ನು ದುಬೈನಲ್ಲಿ ಬಹಳ ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಇದೀಗ ಬಾಲಿಯಲ್ಲಿ ಸುಂದರ ಕ್ಷಣಗಳನ್ನು ಕಳೆದಿದ್ದಾರೆ.
ಇನ್ನು ದರ್ಶನ್ ವೈಯಕ್ತಿಕ ಜೀವನದಲ್ಲಿ ನಡೆದ ಕಹಿ ಘಟನೆ ಬಳಿಕ ಡೆವಿಲ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಮುಂದಿನ ವರ್ಷ ಬಿಡುಗಡೆ ಆಗಲಿದೆ.
ಮಾರ್ಚ್ 12ರಂದು ಡೆವಿಲ್ ಸಿನಿಮಾದ ಚಿತ್ರೀಕರಣ ಪುನರಾರಂಭವಾಯಿತು. ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸೋ ಮೂಲಕ ನಟ ದರ್ಶನ್ ಅರ್ಧಕ್ಕೆ ನಿಂತಿದ್ದ ತಮ್ಮ ‘ಡೆವಿಲ್’ ಚಿತ್ರೀಕರಣವನ್ನು ಪುನರಾರಂಭಿಸಿದರು.
ಈ ಹಿಂದೆ ಮೈಸೂರಿನಲ್ಲಿ ಡೆವಿಲ್ ಶೂಟಿಂಗ್ ಸಾಗುತ್ತಿದ್ದ ಸಂದರ್ಭ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಹತ್ಯೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಸಿಲುಕಿದರು. ನಟ ಜೈಲು ಸೇರಿದ ಹಿನ್ನೆಲೆ ಶೂಟಿಂಗ್ ಸ್ಥಗಿತವಾಗಿತ್ತು. ಈ ಸಾಲಿನ ಮಾರ್ಚ್ ನಡುವಲ್ಲಿ ಮತ್ತೆ ಮೈಸೂರಿನಿಂದಲೇ ತಂಡ ಚಿತ್ರೀಕರಣ ಶುರು ಮಾಡಿತು.




