ಐನಾಪುರ : ಮಾನವತಾವಾದಿ ಸಂದೇಶವನ್ನು ಸಾರುವ ಮೂಲಕ ವಿಶ್ವದಲ್ಲೇ ಖ್ಯಾತಿ ಪಡೆದವರು ಭಗವಾನ್ ಬುದ್ಧರು. ಗೌತಮ ಬುದ್ದರ ಶಾಂತಿ, ಪ್ರೀತಿ ಹಾಗೂ ಸೌಹಾರ್ದತೆಯ ಸಂದೇಶಗಳನ್ನು ನಮ್ಮ ಯುವ ಪೀಳಿಗೆ ಪಾಲಿಸುವಂತಾಗ ಬೇಕು ಎಂದು ಚಿಕ್ಕೋಡಿ ಉದಿಮೆದಾರ ಹಾಗು ಎ ಆಯ್ ಜಿ ಫೌಂಡೇಶನ್ ಸಂಸ್ಥಾಪಕ ಅರವಿಂದ ಘಟಿ ಹೇಳಿದರು.
ಅವರು ಭಾನುವಾರ ತಾಲ್ಲೂಕಿನ ಐನಾಪುರ ಪಟ್ಟಣದ ಭೀಮನಗರದ ಕರುಣಾ ಬೌದ್ಧ ವಿಹಾರದಲ್ಲಿ ಧ ಬುಧಿಷ್ಟ ಸೊಸೈಟಿ ಆಫ್ ಇಂಡಿಯಾ ತಥಾ ಭಾರತೀಯ ಬೌದ್ಧ ಮಹಾಸಭಾರವರ ಸಂಯುಕ್ತಾಶ್ರಯದಲ್ಲಿತಥಾಗತ ಗೌತಮ ಬುದ್ಧರ 2569ನೇ ಜಯಂತಿಯ ಕಾರ್ಯಕ್ರಮವನ್ನುಬುದ್ಧ, ಅಂಬೇಡ್ಕರರ ಪ್ರತಿಮೆಯ ಪೂಜೆಯೊಂದಿಗೆ ದೀಪ ಬೆಳಗಿಸಿ, ವೇದಿಕೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಪ್ರಪಂಚದ ಇತಿಹಾಸ ಪುಟಗಳಲ್ಲಿ ಚಿರಸ್ಥಾಯಿಯಾಗಿರುವ ಪ್ರತಿ ಮಹಾನ್ ವ್ಯಕ್ತಿಯ ಹಿಂದೆಯೂ ತಾಯಿ ಎಂಬ ಅಘಾದ ಶಕ್ತಿ ಇರುತ್ತಾಳೆ. ಮಕ್ಕಳಿಗೆ ಸಂಸ್ಕಾರ ನೀಡಿ, ವ್ಯಕ್ತಿತ್ವ ರೂಪಿಸುವಲ್ಲಿ ತಾಯಿಯ ಪಾತ್ರ ಹಿರಿದಾಗಿ ಮಕ್ಕಳಿಗೆ ಗೋಡಯ ಮೇಲಿರುವ ಚಿತ್ರ ಗಳನ್ನು ತೊರಿಸದೆ ಜೀವಂತ ವ್ಯಕ್ತಿಗಳ ಆದರ್ಶಗಳನ್ನು ಹೇಳಬೇಕು ಎಂದ ಅವರು ಇಡೀ ವಿಶ್ವದಲ್ಲೇ ಒಬ್ಬರೆ ವಿಶ್ವ ಮಾನವ ಅವರು ಭೊದಿಸತ್ವ ಡಾ.ಬಿ.ಆರ್ ಅಂಬೇಡ್ಕರ್ ಮಾತ್ರ ಅದನ್ನು ಯಾರಿಂದಲೂ ಕಾಪಿ ಮಾಡಲು ಸಾದ್ಯವಿಲ್ಲ ಎಂದ ಅವರು ಕಾರ್ಯಕ್ರಮ ದಲ್ಲಿ ನೆನಪಿನ ಕಾಣಿಕೆ,ಶಾಲು ಸತ್ಕಾರ ಮಾಡಿ ದುಂದುವಚ್ಚ ಮಾಡದೆ ಬಡ ಮಕ್ಕಳಿಗೆ ಪಠ್ಯ ಪುಸ್ತಕ, ಧನಸಹಾಯ ಮಾಡಿ ಎಂದು ಸಲಹೆ ನೀಡಿದರು.
ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತು. 2 ದಿನಗಳ ಕಾಲ ಭಗವಾನ್ ಬುದ್ಧರ ಜಯಂತಿ ಅದ್ದೂರಿಯಾಗಿ ನಡೆಯಿತು. ಜಯಂತಿ ನಿಮಿತ್ಯವಾಗಿ ವಿವಿಧ ಕಾರ್ಯಕ್ರಗಮಗಳು ಸಂಪನ್ನಗೊಂಡವು.
ಬೆಳಗ್ಗೆ ಧ್ವಜಾರೋಹಣ, ನಂತರ ಮಹಿಳೆಯರಿಂದ ನೃತ್ಯದ ಮೂಲಕ ಮೆರವಣಿಗೆ ಭೌದ್ಧ ವಿಹಾರದ ವರೆಗೆ ನಡೆಯಿತು.
ದಿವ್ಯ ಸಾನಿಧ್ಯವನ್ನು ಬಾಗಲಕೋಟೆ ಜಿಲ್ಲೆಯ ತೇರದಾಳ ಬೌದ್ಧ ವಿಹಾರದ ಪ್ರಜ್ಞಾಬೋದಿ ಭಂತೇಜೀ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ-ಶಿಕ್ಷಕ ಮಹೇಶ್ ಜಯಕರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಖ್ಯಾತ ಬುದ್ಧ-ಅಂಬೇಡ್ಕರ ವಾದಿಗಳಾದ ಲತಾ,ನಡೊಣಿ, ಆಶಾ ಕಾಂಬಳೆ,ಜಿಜಾಬಾಯಿ ದೋಡಮನಿ ಸುನಂದಾ ಕಾಂಬಳೆ ,ಕಾಜಲ್ ವೇದಿಕೆ ಮೇಲಿದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ,ಪಿ.ಯು.ಸಿಯಲ್ಲಿ ಅತೀ ಹೇಚ್ಚು ಅಂಕಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಸಾಧಕರಿಗೆ, ಗಣ್ಯರಿಗೆ ಸನ್ಮಾನಿಸಿ,ಸತ್ಕರಿಸಲಾಯಿತು. ಆಗಮಿಸಿದ್ದ ಎಲ್ಲರಿಗೆ ಭೋಜನೆ ವ್ಯವಸ್ಥೆ ಮಾಡಲಾಗಿತ್ತು,
ಕುಡಚಿ, ಉಗಾರ,ಕಾಗವಾಡ, ಗುಂಡವಾಡ, ಹಾರೂಗೇರಿ, ಸಂಕರಟ್ಟಿ, ಮೋಳೆ ಊರುಗಳಿಂದ ಉಪಾಸಕ ಉಪಾಸಕಿಯರು ಬಂದು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಿದರು ಮಹಿಳಾ ಸಂಘದ ಸದಸ್ಯರು ಬಂತೇಜಿ ಹಾಗೂ ಅತಿಥಿಗಳನ್ನು ಕೋಲಾಟ ಆಡುವುದರ ಮೂಲಕ ಸ್ವಾಗತಿಸಿಕೊಂಡರು
ಇ ಸಂದರ್ಭದಲ್ಲಿ ಹನಮಂತ ಮಧಾಳೆ, ಲಖನ ವರದನ,ಪಾಂಡು ವಾಡೆದಾರ, ಜಾನು ಕಾಂಬಳೆ, ಬಾಸ್ಕರ ಸಾವಂತ,ರಮೇಶ ನಡೋಣಿ, ಗಜಾನನ ಕಾಂಬಳೆ, ಬಾನು ತಳಕೇರಿ,ಸುಭಾಷ ದೊಡಮನಿ,ಸುನೀಲ ಮಧಾಳೆ,ಜಯಮಾಲಾ ಕಾಂಬಳೆ, ಸುನೀತಾ ಭಂಡಾರೆ, ಭಾರತಿ ನಡೋಣಿ,ಕಸ್ತೂರಿ ತಳಕೇರಿ ಆಶಾ ಕಾಂಬಳೆ,ಬಾಸ್ಕರ ಮಾದರಿ ಇತರರು ಇದ್ದರು.
ಲಖನ ವರದನ ನಿರೂಪಿಸಿದರು.ಹಣಮಂತ ಮಧಾಳೆ,ಸ್ವಾಗತಿಸಿದರು, ಭಾಸ್ಕರ್ ಸಾವಂತ ವಂದಿಸಿದರು.
ವರದಿ: ಮುರಗೇಶ ಗಸ್ತಿ




