Ad imageAd image

ಹೈದರಾಬಾದ್ ಬಿರಿಯಾನಿ ಸೇರಿ ಸ್ಪರ್ಧಾಳುಗಳಿಗೆ ಇಷ್ಟಾರ್ಥ ಭಕ್ಷ್ಯ ಭೋಜನ

Bharath Vaibhav
ಹೈದರಾಬಾದ್ ಬಿರಿಯಾನಿ ಸೇರಿ ಸ್ಪರ್ಧಾಳುಗಳಿಗೆ ಇಷ್ಟಾರ್ಥ ಭಕ್ಷ್ಯ ಭೋಜನ
WhatsApp Group Join Now
Telegram Group Join Now

—————-ಹೈದರಾಬಾದ್  ಸೇರಿ ದೇಶದ ಸಾಂಸ್ಕೃತಿಕ ನಗರರಗಳಲ್ಲಿ  ವಿಶ್ವ ಸುಂದರಿ 72 ನೇ ಆವೃತ್ತಿ ಆರಂಭ

ಹೈದರಾಬಾದ್ : ಹೈದರಾಬಾದ್ ಸೇರಿದಂತೆ ರಾಜ್ಯದ ಪ್ರಮುಖ ಸಾಂಸ್ಕೃತಿಕ ನಗರಗಳಲ್ಲಿ ‘ಮಿಸ್ ವರ್ಲ್ಡ್’ (ವಿಶ್ವ ಸುಂದರಿ) ಸ್ಪರ್ಧೆಯ 72ನೇ ಆವೃತ್ತಿಯು ಆರಂಭಗೊಂಡಿದೆ. ದೇಶ – ವಿದೇಶಗಳ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದು, ಅವರಿಗಾಗಿ ವಿಶೇಷವಾಗಿ ಪ್ರಸಿದ್ಧ ಹೈದರಾಬಾದ್​ ಬಿರಿಯಾನಿ ಸೇರಿದಂತೆ ತರಹೇವಾರು ಸಾಂಪ್ರದಾಯಿಕ ಭಕ್ಷ್ಯಗಳನ್ನು ತಯಾರಿಸಿಕೊಡಲಾಗುತ್ತಿದೆ.

ಭಾರತೀಯರು ಸೇವಿಸುವ ಆಹಾರಕ್ಕೂ, ವಿದೇಶಿಗರು ಸೇವಿಸುವ ಆಹಾರಕ್ಕೂ ಬಹಳ ವ್ಯತ್ಯಾಸ ಇರುವುದರಿಂದ ಇಲ್ಲಿಯ ಗಚಿಬೌಲಿಯ ಟ್ರೈಡೆಂಟ್ ಹೋಟೆಲ್‌ನ ಬಾಣಸಿಗರು ‘ಮಿಸ್ ವರ್ಲ್ಡ್’ ಸ್ಪರ್ಧಾಳುಗಳ ರುಚಿಗೆ ತಕ್ಕಂತೆ ಭಕ್ಷ್ಯಗಳನ್ನು ಸಿದ್ಧಪಡಿಸುತ್ತಿದ್ದಾರೆ. ತೆಲಂಗಾಣದ ಗ್ರಾಮೀಣ ಭಾಗದ ಅತ್ಯಂತ ಜನಪ್ರಿಯ ಖಾದ್ಯವಾದ ಪಚ್ಚಿ ಪುಲುಸುವಿನಿಂದ ಹಿಡಿದು ಹೈದರಾಬಾದ್ ಬಿರಿಯಾನಿಯವರೆಗೆ ಎಲ್ಲವನ್ನೂ ಅವರವರ ಅಭಿರುಚಿಗೆ ತಕ್ಕಂತೆ ತಯಾರಿಸಲಾಗುತ್ತಿದೆ. ಇವುಗಳ ಜೊತೆಗೆ, ಕೇರಳದ ಪ್ರಸಿದ್ಧ ಖಾದ್ಯ ಅಪ್ಪಂ, ಗುಜರಾತಿ ಮತ್ತು ರಾಜಸ್ಥಾನಿ ಸಾಂಪ್ರದಾಯಿಕ ತಿಂಡಿ-ತಿನಿಸುಗಳಿಂದ ಹಿಡಿದು ದಕ್ಷಿಣ ಭಾರತದ ವೈವಿಧ್ಯಮಯ ಖಾದ್ಯಗಳು ಸಹ ವಿಶ್ವ ಸುಂದರಿಯರ ಪಾಕಪದ್ಧತಿಯ ಮೆನುವಿನಲ್ಲಿ ಸೇರಿಕೊಂಡಿವೆ.

ಭಾಗಶಃ ಸ್ಪರ್ಧಾಳುಗಳು ಹೈದರಾಬಾದ್ ಬಿರಿಯಾನಿ ಮತ್ತು ಮೀನಿನ ಸೂಪ್ ಇಷ್ಟಪಡುತ್ತಿದ್ದಾರೆ. ಈಗಾಗಲೇ ಈ ಭಕ್ಷ್ಯಗಳ ರುಚಿ ನೋಡಿದ್ದರಿಂದ ಅದನ್ನೇ ಹೆಚ್ಚಾಗಿ ಆರ್ಡರ್ ಮಾಡುತ್ತಿದ್ದಾರೆ. ಅವರಿಗೆ ಅವರ ದೇಶದ ರುಚಿಗಳಿಗಿಂತ ನಮ್ಮ ಸಾಂಪ್ರದಾಯಿಕ ಖಾದ್ಯಗಳಾದ ಲೆಂಟಿಲ್ ಸೂಪ್, ಗ್ರೀನ್ ಚಿಲ್ಲಿ ಸೂಪ್, ಫಿಶ್ ಸೂಪ್, ಚಿಕನ್ ಫ್ರೈ ಮತ್ತು ಮಟನ್ ಕೀಮಾಗಳೇ ಹೆಚ್ಚು ಇಷ್ಟ. ಅವರು ಪಿಜ್ಜಾವನ್ನು ಸೇವಿಸುವುದು ಹೆಚ್ಚು. ವಿಶೇಷವಾಗಿ ಕೈಯಿಂದ ತಯಾರಿಸಿದ ಪಿಜ್ಜಾ ಎಂದರೆ ಇವರಿಗೆಲ್ಲ ಇಷ್ಟ. ಕೆನಡಾದ ಸ್ಪರ್ಧಿಯ ಮನವಿ ಮೇರೆಗೆ ತನ್ನ ತಾಯಿಯೊಂದಿಗೆ ಸಮಾಲೋಚಿಸಿ ವಿಶೇಷ ಮೆನು ಸಿದ್ಧಪಡಿಸಲಾಗುತ್ತಿದೆ. ನಮ್ಮ ಅತಿಥಿಗಳ ಅಭಿರುಚಿಗೆ ತಕ್ಕಂತೆ ಭಕ್ಷ್ಯಗಳನ್ನು ಒದಗಿಸುವಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ ಬಾಣಸಿಗ ಉದಯ್ ಎಂಬುವರು.

ತೆಲುಗು ರಾಜ್ಯಗಳಲ್ಲಿನ ಪಾಕಪದ್ಧತಿಯು ಸಾಮಾನ್ಯವಾಗಿ ಮೆಣಸಿನಕಾಯಿ ಮತ್ತು ಖಾರದ ಮಸಾಲೆಗಳಿಂದ ಕೂಡಿರುತ್ತದೆ. ಇವುಗಳನ್ನು ಒಳಗೊಂಡಿರುವ ಭಕ್ಷ್ಯಗಳನ್ನು ತಿನ್ನುವಾಗ ಸ್ಪರ್ಧಿಗಳಿಗೆ ಯಾವುದೇ ತೊಂದರೆಯಾಗದಂತೆ ಮುಂಚಿತವಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪ್ರತಿ ಸ್ಪರ್ಧಿಗೂ ವಿಶೇಷ ಮೆನು ರಚಿಸಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!