ಸಿಂಧನೂರು : ಮೇ 21ರಂದು ತಾಲೂಕ ಪಂಚಾಯತ ಸಭಾ ಭವನದದಲ್ಲಿ ತಾಲೂಕ ಪಂಚಾಯತ ಮಾಲಿಕತ್ವದಲ್ಲಿರುವ ಗಂಗಾವತಿ ಮತ್ತು ಸಿಂಧನೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ 30 ವಾಣಿಜ್ಯ ಮಳಿಗೆಗಳನ್ನು ಪ್ರತಿ ಮಾಹೆ ಬಾಡಿಗೆ ಆಧಾರದಲ್ಲಿ 3 ವರ್ಷಗಳ ಅವಧಿಗೆ ಸ್ವಸಹಾಯ ಸಂಘಗಳ ಸಂಬಂಧದಲ್ಲಿ 5 ವರ್ಷಗಳವರೆಗೆ ನಿರ್ಧಿಷ್ಟಪಡಿಸಿರುವ ಷರತ್ತುಗಳನ್ನುಯ ಒಪ್ಪಂದ ಮಾಡಿಕೊಂಡು ಬಾಡಿಗೆ ನೀಡಲು ಈ ಬಹಿರಂಗ ಹರಾಜುನ್ನು ಕರೆಯಲಾಗಿದೆ ಪ್ರತಿ ಮಳಿಗೆಗೆ ತಾ. ಪಂ ಹರಾಜು ಮೊತ್ತ 22,000 ಸಾವಿರ ರೂ ಇದ್ದರೆ 44,000 ಸಾವಿರ ರೂಗಳು ವರೆಗೆ ಹರಾಜು ಪ್ರಕ್ರಿಯೆ ನಡೆಯಿತು ಇದರ ಇಎಂಡಿ ಪ್ರತಿ ಮಳಿಗೆಗೆ ರೂ 40,000 ಸಾವಿರ ವಾರ್ಷಿಕ ಬಾಡಿಗೆಯ ಶೇ. 50ರ ಮೊತ್ತ ಇರುತ್ತದೆಯೆಂದು ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ತಿಳಿಸಿದರು.
ನಂತರ ಅವರು ಮಾತನಾಡಿ ಈ ಹರಾಜುನಲ್ಲಿ ಪಾಲ್ಗೊಳ್ಳುವರು ಜಿಎಸ್‌ಟಿ ಮೊತ್ತ ಮತ್ತು ಹರಾಜು ಮೊತ್ತ ಸೇರಿಸಿ ಬಾಡಿಗೆ ನೀಡುವಂತೆ ಸೂಚಿಸಲಾಗಿದೆ ಈ ಹರಾಜು ಪ್ರಕ್ರಿಯೆ ಕರಾರು ಪತ್ರದಲ್ಲಿನ ಯಾವುದೇ ಷರತ್ತು ನಿರ್ಬಂಧನೆಗಳನ್ನು ಪಾಲಿಸದಿದ್ದಲ್ಲಿ ಯಾವುದೇ ಮುನ್ಸೂಚನೆ ನೀಡಿದೆ ಒಪ್ಪಂದ ಕಾರರನ್ನು ರದ್ದುಪಡಿಸಿ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡು ಮಳಿಗೆ, ಬಾಡಿಗೆಯನ್ನು ನಿಯಮಾನುಸಾರ ಖಾಲಿ ಮಾಡಲು ಕ್ರಮ ವಹಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ, ತಾ. ಪಂ. ಇಒ. ಚಂದ್ರಶೇಖರ್. ಎಡಿ. ಅಮರ ಗುಂಡಪ್ಪ. ಹಾಲಂಬಾಶ್. ಸಾಬಣ್ಣ ವಗ್ಗರ್. ರಾಜ ಬಲಿ ಟಿಪಿಒ. ದಿನೇಶ್ ರಾಘವೇಂದ್ರ ವಿಜಯೇಗೌಡ ಪಾಟೀಲ್ ಇದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ




