Ad imageAd image

ರಾಜ್ಯ ವಿಶ್ವಕರ್ಮ ಚುನಾವಣೆಯಲ್ಲಿ ಈಶ್ವರಚಾರಿ, ಬಾಬು ಪತ್ತಾರ್ ಮತ್ತು ಉಮೇಶ್ ತಂಡಕ್ಕೆ ಬೆಂಬಲ ನೀಡಿ

Bharath Vaibhav
ರಾಜ್ಯ ವಿಶ್ವಕರ್ಮ ಚುನಾವಣೆಯಲ್ಲಿ ಈಶ್ವರಚಾರಿ, ಬಾಬು ಪತ್ತಾರ್ ಮತ್ತು ಉಮೇಶ್ ತಂಡಕ್ಕೆ ಬೆಂಬಲ ನೀಡಿ
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದಲ್ಲಿ ವಿಶ್ವಕರ್ಮ ಸಮಾಜದ ಅಭಿವೃದ್ಧಿ ಮತ್ತು ಒಗ್ಗಟ್ಟಾಗಿ ಹೋಗುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದಾಗ ಮಾತ್ರ ಸಂಘ ಸಂಸ್ಥೆಗಳು ಸಮಾಜ ಬೆಳೆಯಲ್ಲಿಕೆ ಸಾಧ್ಯ ಎಂದು ಸಮಾಜದ ಮುಖಂಡ ಹಾಗೂ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂ.ಪಿ.ಈಶ್ವರಾಚಾರ್ ಹೇಳಿದರು.

ಅವರು ಇದೆ ತಿಂಗಳ 25ರಂದು ನಡೆಯುವ ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ಚುನಾವಣೆ ಹಿನ್ನಲೆಯಲ್ಲಿ ನಗರದ ವಿಜಯನಗರದ ಪ್ರತಿಷ್ಠಿತ ಹೋಟೆಲ್ ನ್ಯೂ ಶಾಂತಿ ಸಾಗರ ಪಾರ್ಟಿ ಹಾಲ್ನಲ್ಲಿ ಈಶ್ವರಚಾರಿ, ಬಾಬು ಪತ್ತಾರ್ ಮತ್ತು ಉಮೇಶ್ ಸೇರಿದಂತೆ ಸಮಾಜದ ಮುಖಂಡರ ಮಹಿಳೆಯರ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಗೆ ಜ್ಯೋತಿ ಬೆಳಗಿಸಿ ಅವರು ಈ ತಂಡಕ್ಕೆ ಜಯಶೀಲರಾಗಿ ಮಾಡಿರಿ ಎಂದು ಮನವಿ ಮಾಡಿ ಮಾತನಾಡಿದರು.

ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷ ಹಾಗೂ ಸಿಂಡಿಕೇಟ್ ಸದಸ್ಯ ಬಾಬು ಪತ್ತಾರ್ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು.

ರಾಜ್ಯ ವಿಶ್ವಕರ್ಮ ಸಮಾಜ ಮಾಜಿ ಅಧ್ಯಕ್ಷ ಬಿ. ಉಮೇಶ್ ಮಾತನಾಡಿ ನನ್ನ ಅಧಿಕಾರ ಅವಧಿಯಲ್ಲಿ ಶೇಷಾದ್ರಿಪುರಂದಲ್ಲಿ ಇರುವ ವಿಶ್ವಕರ್ಮ ರಾಜ್ಯ ಪ್ರಧಾನ ಕಚೇರಿ ಮೇಲ್ದರ್ಜೆ ಕಟ್ಟಡ ನಿರ್ಮಾಣ, ಸಮಾಜದ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ವಸತಿ ನೀಡಲಾಗುತ್ತದೆ ಹೀಗೆ ಅನೇಕ ಉತ್ತಮ ಕೆಲಸ ಮಾಡಿದ್ದೇನೆ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾದವರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಉಮೇಶ್ ಭಾವುಕರಾಗಿ ಮಾತನಾಡಿದರು.

ಕರ್ನಾಟಕ ರಾಜ್ಯ ವಿಶ್ವಕರ್ಮ ನಿಗಮದ ಪ್ರಪ್ರಥಮ ಮಾಜಿ ಅಧ್ಯಕ್ಷ ಶ್ರೀನಿವಾಸ್ ಆಚಾರ್ಯ ಮಾತನಾಡಿ ವಿಶ್ವಕರ್ಮರಾದವರು ನಾವುಗಳು ಒಂದಾಗಿ ಒಗ್ಗಟ್ಟಾಗಿ ಇದ್ದಾಗ ಮಾತ್ರ ಸರ್ಕಾರ ಮತ್ತು ಜನಪ್ರತಿನಿಧಿಗಳ ಹತ್ತಿರ ಸಮಾಜದ ಏಳಿಗೆಗೆ ಬೇಕಾದ ಸಹಕಾರ ಸೌಲಭ್ಯಗಳು ಪಡೆಯಲಿಕ್ಕೆ ಸಾಧ್ಯ ಯಾರೇ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದವರಿಗೆ ಸಲಹೆ ಸೂಚನೆ ಮಾರ್ಗದರ್ಶನ ಸದಾ ಸಮಾಜಕ್ಕೆ ನೀಡುವುದಾಗಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಆಚಾರ್ಯ ಭರವಸೆ ನೀಡಿದರು.

ಸಮಾಜ ಚಿಂತಕರು ಮತ್ತು ಮುಖಂಡರು ಜ್ಞಾನೇಶ್ವರ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಸತ್ಯವತಿ ಸೇರಿದಂತೆ ಚುನಾವಣಾ ಕಣದಲ್ಲಿರುವ 12 ಅಭ್ಯಾರ್ಥಿಗಳು, ಸಮಾಜದ ಹಿರಿಯ ಮುಖಂಡ ದ್ಯಾಮಣ್ಣ ಬಡಿಗೇರ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಿಶ್ವಕರ್ಮ ಪ್ರಭಾವಿ ನಾಯಕರಾದ ಭಾಸ್ಕರ್ ಆಚಾರಿ ಹಾಗೂ ರಾಮಚಂದ್ರ ವಿಶ್ವಕರ್ಮ, ಲಗ್ಗೆರೆ ಪ್ರಭಾವಿ ಯುವ ಮುಖಂಡ ರವಿ ಕುಮಾರ್ ಲಗ್ಗೆರೆ, ಸ್ವಾಮಿ ಆಚಾರ್ಯ, ಬಸವರಾಜ್ ರಥಶಿಲ್ಪಿ, ಕವಿತಾ ಆಚಾರ್ಯ ಉತ್ತರ ಕರ್ನಾಟಕ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ , ಮಹಿಳಾ ಸಂಘದ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.

ವರದಿ : ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!