—————————————————————ಬಿಮ್ಸ್ ಸಿಎಒ ಡಾ. ಸಿದ್ದು ಹುಲ್ಲೋಳಿ ಟೆನ್ನಿಸ್ ಸಾಧನೆ
ಬೆಳಗಾವಿ: ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಿಎಒ ಡಾ. ಸಿದ್ದು ಹುಲ್ಲೋಳಿ ಅವರು, ಶಿವಮೊಗ್ಗದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಡಬಲ್ ರಾಜ್ಯ ಮಟ್ಟದ ಟೆನ್ನಿಸ್ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನಿತ್ಯವೂ ಬಿಮ್ಸ್ ಬೆಳವಣಿಗೆಗಾಗಿ ವೈದ್ಯಕೀಯ ಸೇವೆಯಲ್ಲಿಯೇ ನಿರತರಾಗಿರುವ ಡಾ. ಹುಲ್ಲೋಳಿ ಅವರು, ಪ್ರವೃತ್ತಿಯಲ್ಲಿ ಅತ್ಯುತ್ತಮ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ ಇದೀಗ ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಟೆನ್ನಿಸ್ ಕ್ರೀಡಾಕೂಟದಲ್ಲಿ ಡಬಲ್ ಟೆನ್ನಿಸ್ ಗೆದ್ದು ಬೀಗಿದ್ದಾರೆ.
ಯುವ ವೈದ್ಯರು, ಶುಶ್ರೂಷಕರು, ಸಹಾಯಕರು ಹಾಗೂ ಇತರ ಸಿಬ್ಬಂದಿಗಳಿಗೆ ಸಲಹೆ, ಮಾರ್ಗದರ್ಶನ ನೀಡುವ ಡಾ. ಹುಲ್ಲೋಳಿ ಅವರ ಅದ್ಭುತ ಕ್ರೀಡಾ ಸಾಧನೆಗೆ ಇಡೀ ಬಿಮ್ಸ್ ಸಂಸ್ಥೆಯು ಹೆಮ್ಮೆ ಪಟ್ಟಿದೆ.
ಬಿಮ್ಸ್ ನಿರ್ದೇಶಕ ಡಾ. ಅಶೋಕ ಶೆಟ್ಟಿ ಅವರು, ಬಿಡುವಿಲ್ಲದ ಸಮಯದಲ್ಲಿಯೂ ಆಸಕ್ತಿ, ಶ್ರದ್ಧೆಯಿಂದ ಕ್ರೀಡಾ ಜಗತ್ತಿನಲ್ಲಿ ಗುರುತಿಸಿಕೊಂಡು, ಅತ್ಯುತ್ತಮ ಸಾಧನೆಗೈದ ಡಾ. ಹುಲ್ಲೋಳಿ ಅವರ
ಸಮರ್ಪಣಾ ಧೋರಣೆ, ಸೇವಾ ಗುಣ ಮತ್ತು ಜೀವನ ಶೈಲಿ ಯುವ ಸಮೂಹಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದ್ದಾರೆ. ಜೊತೆಗೆ ವೈದ್ಯಕೀಯ ವೃತ್ತಿ ಮತ್ತು ಕ್ರೀಡಾ ಪ್ರವೃತ್ತಿ ಒಟ್ಟಿಗೇ ಮುಂದುವರಿಯಲಿ ಎಂದು ಅಶಿಸಿದ್ದಾರೆ.
ಟೆನ್ನಿಸ್ ಪಂದ್ಯ ಗೆದ್ದು ಬೀಗಿದ್ದಕ್ಕೆ ಡಾ. ಹುಲ್ಲೋಳಿ ಅವರನ್ನು ಬಿಮ್ಸ್ ಸತ್ಕರಿಸಿ ಗೌರವಿಸಿದೆ. ಈ ಸಂದರ್ಭ ವೈದ್ಯರು, ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.




