ಹೈದರಾಬಾದ್: ಹಾಲಿ ಮಿಸ್ ಇಂಗ್ಲೆಂಡ್ ಮಿಲ್ಲಾ ಮ್ಯಾಗೀ ಹೈದರಾಬಾದ್ನಲ್ಲಿ ನಡೆಯುತ್ತಿರುವ ಮಿಸ್ ವರ್ಲ್ಡ್ 2025 ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.
24 ವರ್ಷದ ಸ್ಪರ್ಧಿ ಮಿಲ್ಲಾ ಮ್ಯಾಗೀ ಶೋಷಣೆಯ ಭಾವನೆಗಳು ಮತ್ತು ನೈತಿಕ ಸಂಘರ್ಷದ ಕಾರಣವನ್ನು ನೀಡಿ ಹಠಾತ್ತನೆ ಸ್ಪರ್ಧೆಯಿಂದೆ ಹಿಂದೆ ಸರಿಸಿದ್ದಾರೆ ಎನ್ನಲಾಗಿದೆ.
ಆರಂಭದಲ್ಲಿ ಅವರು ವೈಯಕ್ತಿಕ ಕಾರಣಗಳಿಂದ ಸ್ಪರ್ಧೆಯಿಂದ ಹೊರನಡೆಯುವ ನಿರ್ಧಾರ ಮಾಡಿದ್ದಾಗಿ ವರದಿಯಾಗಿತ್ತು. ಆದರೆ ಅವರ ವಿಶೇಷ ಸಂದರ್ಶನದಲ್ಲಿ ಅವರು ಸ್ಪರ್ಧಿಗಳ ಮೇಲಿನ ಗೌರವದ ಕೊರತೆಯ ಧ್ವನಿ ಎತ್ತಿದ್ದಾರೆ. ನನ್ನನ್ನು ವೇಶ್ಯೆಯಂತೆ ನಡೆಸಿಕೊಂಡುರು ಎಂಬೆಲ್ಲಾ ಗಂಭೀರ ಆರೋಪ ಮಾಡಿದ್ದಾರೆ.
ವರದಿಗಳ ಪ್ರಕಾರ ಮಿಸ್ ಇಂಗ್ಲೆಂಡ್ ರನ್ನರ್ ಅಪ್ ಷಾರ್ಲೆಟ್ ಗ್ರಾಂಟ್ ಈಗ ಫೈನಲ್ನಲ್ಲಿ ಇಂಗ್ಲೆಂಡ್ ಅನ್ನು ಪ್ರತಿನಿಧಿಸಲಿದ್ದಾರೆ. ಮ್ಯಾಗೀ ಅವರ ನಿಲುವು ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳ ಪ್ರಸ್ತುತತೆ ಮತ್ತು ಅಭ್ಯಾಸಗಳ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.




