Ad imageAd image

ಗೋಕಾಕದ ಹಾಜಿ ಜಾವೇದ ಮುಲ್ಲಾಗೆ ಆಂಧ್ರಪ್ರದೇಶ ಅಲ್ಪಸಂಖ್ಯಾತರ ರಾಜ್ಯ ಘಟಕದ ಸಹ ಉಸ್ತುವಾರಿ ಹುದ್ದೆ

Bharath Vaibhav
ಗೋಕಾಕದ ಹಾಜಿ ಜಾವೇದ ಮುಲ್ಲಾಗೆ ಆಂಧ್ರಪ್ರದೇಶ ಅಲ್ಪಸಂಖ್ಯಾತರ ರಾಜ್ಯ ಘಟಕದ ಸಹ ಉಸ್ತುವಾರಿ ಹುದ್ದೆ
WhatsApp Group Join Now
Telegram Group Join Now

ಗೋಕಾಕ : ಕಾಂಗ್ರೆಸ್ಸ ಪಕ್ಷಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತ ಬಂದಿರುವ ಗೋಕಾಕದ ಹಾಜಿ ಜಾವೇದ ಮುಲ್ಲಾ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯು ಹೊಸ ಜವಾಬ್ದಾರಿ ನೀಡಿದೆ.

ಹಾಜಿ ಜಾವೇದ ಮುಲ್ಲಾ ಅವರಿಗೆ ಆಂಧ್ರಪ್ರದೇಶ ಅಲ್ಪಸಂಖ್ಯಾತರ ರಾಜ್ಯ ಘಟಕದ ಸಹ ಉಸ್ತುವಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ, ಇದರ ಬೆನ್ನಲ್ಲೆ ಜಾವೇದ ಮುಲ್ಲಾ ಇವರು ಇದಕ್ಕೆ ಕಾರಣಿಕರ್ತರಾದ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಇವರನ್ನು ಬೇಟಿಯಾಗಿ ಅವರನ್ನು ಸತ್ಕರಿಸಿ ಸನ್ಮಾನಿಸಿ ಆಶಿರ್ವಾದ ಪಡೆದರು.

ನಂತರ ಸಚಿವರು ಹಾಜಿ ಜಾವೀದ್ ಮುಲ್ಲಾ ಇವರಿಗೆ ಶಾಲು ಹೊದಿಸಿ ಸತ್ಕರಿಸಿ ಸನ್ಮಾನಿಸಿ ಕಾಂಗ್ರೆಸ್ ಪಕ್ಷ ತಮ್ಮ ನಿಷ್ಟಾವಂತ ಸೇವೆ ಗುರುತಿಸಿ ದೆ, ಅದರಿಂದ ಪಕ್ಷಕ್ಕೆ ತಮ್ಮ ಸೇವೆ ಅವಶ್ಯವಾಗಿದೆ,ಅದರ ಜೊತೆಯಲ್ಲಿ ಕಾರ್ಯಕರ್ತರನ್ನು ಜೊತೆಗೂಡಿಕೊಂಡು ಪಕ್ಷಕ್ಕಾಗಿ ಶ್ರಮಿಸಲು ಸಲಹೆ ನೀಡಿದರು.

ತಮ್ಮ ಮಾರ್ಗದರ್ಶನದಲ್ಲಿ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಬಲವರ್ಧನೆಯಾಗಲೆಂದು ಶುಭ ಹಾರೈಸಿದರು.ನಂತರ ಹಾಜಿ ಜಾವೇದ ಮುಲ್ಲಾ ಇವರು ತಮ್ಮ ಕಾರ್ಯಕರ್ತರ ಜೊತೆಯಲ್ಲಿ ದರ್ಗಾಗಳಿಗೆ ತೆರಳಿ ದೇವರ ಆಶರ್ವಾದ ಪಡೆದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು,ಸ್ಥಳಿಯರು ಹಾಗೂ ಸುತ್ತಮುತ್ತ ಗ್ರಾಮಗಳಿಂದ ಆಗಮಿಸಿದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕಗಳ ಸದಸ್ಯರು,ಕಾಂಗ್ರೆಸ್ ಕಾರ್ಯಕರ್ತರು ಹಾಜಿ ಜಾವೇದ ಮುಲ್ಲಾ ಇವರ ಮನೆಯ ಮುಂದೆ ಪಟಾಕಿ ಹಚ್ಚಿ ಸಂಬ್ರಮಿಸಿದರು. ಆಗಮಿಸಿದ ಎಲ್ಲರೂ ಸೇರಿ ಜಾವೇದ ಅವರಿಗೆ ಸಿಹಿ ತಿನಿಸಿ ಮಾಲಾರ್ಪಣೆ ಮಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಂಜೂರ ಶಂಸೇರ, ಹಮೀದ್ ಗುಡವಾಲೆ, ಮುಸ್ತಾಕ ಫುಲ್ತಾಂಬೆ, ತನ್ವೀರ ಶಂಶೇರ, ಇಮ್ರಾನ್ ತಪಕೀರೆ, ಖಾಲಿದ್ ಅತ್ತಾರ, ಸಮೀರ ಅರಭಾವಿ, ರಸೀದ, ಶಮ್ಮು ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.

ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!