Ad imageAd image

 ನೂರಕ್ಕೆ ನೂರು ಈಶ್ವರಚಾರಿ, ಬಾಬು ಪತ್ತಾರ್ ಮತ್ತು ಉಮೇಶ್ ತಂಡ ಗೆಲ್ಲುತ್ತದೆ: ಭಾಸ್ಕರ್ ಆಚಾರಿ

Bharath Vaibhav
 ನೂರಕ್ಕೆ ನೂರು ಈಶ್ವರಚಾರಿ, ಬಾಬು ಪತ್ತಾರ್ ಮತ್ತು ಉಮೇಶ್ ತಂಡ ಗೆಲ್ಲುತ್ತದೆ: ಭಾಸ್ಕರ್ ಆಚಾರಿ
WhatsApp Group Join Now
Telegram Group Join Now

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರು ನಗರದ ಶೇಷಾದ್ರಿಪುರಂದಲ್ಲಿ ರುವ ವಿಶ್ವಕರ್ಮ ಸಮಾಜದ ಪ್ರಧಾನ ಕಚೇರಿಯಲ್ಲಿ ಇಂದು ಚುನಾವಣೆ ನಡೆಯಿತು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಿಶ್ವಕರ್ಮ ಸಮಾಜದ ಪ್ರಭಾವಿ ಮುಖಂಡ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಾಸ್ಕರ್ ಆಚಾರಿ ಅವರು ಉತ್ಸಾಹದಿಂದ ಮತಗಟ್ಟಿಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದರು ನಂತರ ಅವರು ಈಶ್ವರಚಾರಿ, ಬಾಬು ಪತ್ತಾರ್ ಮತ್ತು ಉಮೇಶ್ ಅವರು 12ಜನ ಸೇರಿ ತಂಡ ರಚನೆ ಮಾಡಿ ಚುನಾವಣೆ ಎದುರುಸುತ್ತಿದ್ದಾರೆ ಅದರಲ್ಲಿ ಈ ತಂಡದವರು ತುಂಬಾ ಸಮಾಜದ ಕಳಕಳಿ ಹೊಂದಿದವರು ಇವರ ತಂಡ ಭರ್ಜರಿ ಗೆಲುವು ಸಾಧಿಸಿದ್ದಾರೆ ಅದರಲ್ಲಿ ಸಂಶಯವಿಲ್ಲಾ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಿಶ್ವಕರ್ಮ ಸಮಾಜದ ಹಿರಿಯ ಮತ್ತು ಪ್ರಭಾವಿ ಮುಖಂಡ ಹೇಳಿದರು.

ಮುಂದಿನ ದಿನಗಳಲ್ಲಿ ಈ ನೂತನ ಚುನಾಯಿತ ಪ್ರತಿನಿಧಿಗಳು ಇಡಿ ರಾಜ್ಯದಡೆ ಸುತ್ತಾಡಿ ಸಮಾಜದಲ್ಲಿ ಬಡವರ ಮಕ್ಕಳ ಶಿಕ್ಷಣದಿಂದ ವಂಚಿತರಾಗದಂತೆ ಗುರುತಿಸುವ ಕೆಲಸ ಮಾಡಬೇಕಾಗಿದೆ ಎಕೆಂದರೆ ನಮ್ಮ ವಿಶ್ವಕರ್ಮ ಸಮಾಜದ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದ ಸಮಾಜ ಎಂದರೆ ವಿಶ್ವಕರ್ಮ ಸಮಾಜ ರಾಜ್ಯದಲ್ಲಿ 25ಲಕ್ಷಕ್ಕೂ ಹೆಚ್ಚು ಜನರಿದ್ದಾರೆ ಪ್ರತಿಯೋಬ್ಬರನ್ನು ಸದಸ್ಯರಾಗ ಬೇಕು ಮುಂಬರುವ ಲೋಕಸಭೆ ವಿಧಾನಸಭೆ ಮತ್ತು ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅನುಕೂಲ ಆಗುತ್ತದೆ ಎಂದು ಭಾಸ್ಕರ್ ಆಚಾರಿ ಬಿ.ವಿ ನ್ಯೂಸ್ -5 ಚಾನಲ್ ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ರಾಮಚಂದ್ರ ವಿಶ್ವಕರ್ಮ, ದ್ಯಾಮಣ್ಣ ಬಡಿಗೇರ್, ವೀರಾ ಆಚಾರ್ಯ, ಸುರೇಶ್ , ರವಿಕುಮಾರ್ ಲಗ್ಗೆರೆ,ಕವಿತಾ ಆಚಾರ್ಯ ಶೋಭಾ, ಸತ್ಯವತಿ ಸೇರಿದಂತೆ ಸಮಾಜದ ಹಿರಿಯ ಮುಖಂಡರು ಮಹಿಳೆಯರು ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!