ರಾಮದುರ್ಗ : ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪುರಸಭೆ ಕಲ್ಯಾಣ ಮಂಟಪವು ದುರಸ್ತಿ ಇರುವುದರಿಂದ ಪುರಸಭೆಗೆ ಒಂದು ವರ್ಷಕ್ಕೆ ಸುಮಾರು 5 ರಿಂದ 8 ಲಕ್ಷದವರೆಗೆ ಬಾಡಿಗೆ ರೂಪದಲ್ಲಿ ಬರುವ ಆದಾಯವನ್ನು ಪುರಸಭೆ ಅವರು ಕಳೆದುಕೊಳ್ಳುತ್ತಿದ್ದೀರಿ.
ಆದರೆ ಪುರಸಭೆ ಕಲ್ಯಾಣ ಮಂಟಪ ನಿರ್ಮಾಣವಾದಾಗಿನಿಂದ ಇದುವರೆಗೂ ಅಲ್ಲಿ ಸರಿಯಾಗಿ ವಿದ್ಯುತ್, ಶೌಚಾಲಯದ ನೀರು, ಕಿಡಕಿಗಳು, ರೂಮಿನ ಬಾಗಿಲುಗಳು ಸರಿಯಾಗಿ ಇಲ್ಲದೇ ಇರುವುದರಿಂದ ಇದುವರೆಗೂ ದುರಸ್ತಿ ಮಾಡದೆ ಇರುವುದು ಬೇಸರದ ಸಂಗತಿಯಾಗಿದೆ.
ಸಭೆ ಸಮಾರಂಭಗಳಿಗೆ ಹಾಗೂ ಮದುವೆ ಸೀಜನ್‌ನಲ್ಲಿ ಬಡವರಿಗೆ ಈ ಕಲ್ಯಾಣ ಮಂಟಪವು ತುಂಬಾ ಅನುಕೂಲವಾಗಿದ್ದು ಇವಾಗ ಈ ಕಲ್ಯಾಣ ಮಂಟಪ ದುರಸ್ತಿಯಲ್ಲಿ ಇರುವುದರಿಂದ ಪುರಸಭೆಯವರು ಬಾಡಿಗೆ ನೀಡದೇ ಇರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗದೆ ತೊಂದರೆಯಾಗಿದ್ದು ಆದಷ್ಟು ಬೇಗ ಈ ಪುರಸಭೆ ಕಲ್ಯಾಣ ಮಂಟಪವನ್ನು ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಪಟ್ಟಣದ ಪುರಸಭೆ ಕಚೇರಿಯ ಗೋಡೆಗಳು ಅಲ್ಲಲ್ಲಿ ಶೀತಲಗೊಂಡಿದ್ದು ಮಳೆ ಆದರೆ ಸಾಕು ಮಳೆ ನೀರು ಪುರಸಭೆಯ ಕಚೇರಿಯ ಒಳಗೆ ಮಳೆಯ ನೀರು ಬೀಳುತ್ತದೆ ಇದರಿಂದ ಕಚೇರಿಯಲ್ಲಿ ಇರತಕ್ಕಂತಹ ದಾಖಲೆಗಳು ಹಾಳಾಗುವ ಸಾಧ್ಯತೆ ಇದೆ. ಅದಲ್ಲದೆ ಯಾವಾಗ ಬೇಕಾದರೂ ಪುರಸಭೆ ಕಟ್ಟಡದ ಗೋಡೆಯು ಬೀಳುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಅಲ್ಲಿ ಕೆಲಸ ಮಾಡತಕ್ಕಂಥ ಸಿಬ್ಬಂದಿಗಳಿಗೆ ಶೀತಲಗೊಂಡ ಗೋಡೆಗಳು ಅಪಾಯಕಾರಿ ಆಗಿದ್ದು ದಯವಿಟ್ಟು ಪುರಸಭೆ ಕಚೇರಿ ಮತ್ತು ಪುರಸಭೆ ಕಲ್ಯಾಣ ಮಂಟಪವನ್ನು ದುರಸ್ತಿ ಮಾಡಬೇಕೆಂದು ಪತ್ರಕರ್ತರ ಮುಂದಾಳತ್ವದಲ್ಲಿ ಸಾರ್ವಜನಿಕರ ಜೊತೆಗೂಡಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಪತ್ರಕರ್ತರಾದ ಪ್ರಶಾಂತ್ ಶಿ ಅಂಗಡಿ, ಮಂಜುನಾಥ್ ಕಲಾದಗಿ, ಮಹೇಶ್ ದೊಡಮನಿ, ಯಮನಪ್ಪ ಬಾರ್ಕಿ, ಬಸವರಾಜ ನಾಗರಾಳ, ಇದ್ದರು
ವರದಿ : ಮಂಜುನಾಥ ಕಲಾದಗಿ




