ನಿಪ್ಪಾಣಿ :ಕರ್ನಾಟಕ ನಾಗರೀಕ ಸೇವಾ ಆದಿನಿಯಮ 1978 ರ ಕರ್ನಾಟಕ ಪೂರ್ವ ಕಾರ್ಮಿಕರ ಅನ್ವಯಿಸುವುದು ಹಾಗೂ ಪಂಚಾಯತ್ ರಾಜ್ ಇಲಾಖೆ ಪರಿಗಣಿಸಿರುವ ಮಾದರಿಯಲ್ಲಿಯೇ ರಾಜ್ಯದ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಿ ಜಿಪಿಎಫ್ ಕೆ ಜಿ ಐ ಡಿ ಜ್ಯೋತಿ ಸಂಜೀವಿನಿ ಸೇರಿದಂತೆ ಸರಕಾರಿ ಪಡೆಯುವ ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸಿರುವ ಬಗ್ಗೆ ಶಾಸನ ಸಭೆಯಲ್ಲಿ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ಮಾಡಿ ಯಥಾವತ್ತಾಗಿ ಪೌರ ಸೇವಾ ನೌಕರಿಗೆ ಜಾರಿ ಮಾಡುವ ಬಗ್ಗೆ ಕುರಿತು ನಿಪ್ಪಾಣಿಯಲ್ಲಿ ಮುಷ್ಕರ.
ಇದೇ ವಿಷಯ ಕುರಿತು ಇವತ್ತು ನಿಪ್ಪಣಿಯಲ್ಲಿ ಪೌರಕಾರ್ಮಿಕರ ಅಧ್ಯಕ್ಷರಿಗೆ ನೇರ ಈ ಮುಷ್ಕರ ಯಾವ ಕಾರಣಕ್ಕಾಗಿ ಎಂದು ಪ್ರಶ್ನಿಸಿದಾಗ ಅವರು ಹೇಳಿದ್ದು ಹೀಗೆ ಪೌರಸಭೆಯಲ್ಲಿ ಸುಮಾರು ವರ್ಷಗಳಿಂದ ಕಾರ್ಮಿಕರು ಹಗಲು ರಾತ್ರಿ ನಮ್ಮ ನಗರ ನಮ್ಮ ಮನೆಯೆಂದು ದುಡಿಯುತ್ತಿದ್ದಾರೆ ನಗರದಲ್ಲಿ ಸ್ವಚ್ಛತೆ ಸಭೆಯ ಕೆಲಸವನ್ನು ಗುತ್ತಿಗೆದಾರರಿಂದ ಮಾಡುತ್ತಿದ್ದಾರೆ ಆದ್ದರಿಂದ ಅವರಿಗೆ ಯಾವುದೇ ಕಾಯಂ ಸುರೀತಿಯಾಗಿ ಕೆಲಸ ಅಥವಾ ಸರ್ಕಾರದ ಯಾವುದೇ ಸಕಲ ಸೌಲಭ್ಯವಿಲ್ಲದೆ ಅವರು ಸುಮಾರು ವರ್ಷಗಳಿಂದ ದುಡಿಯುತ್ತಿದ್ದಾರೆ ಇದನ್ನೇ ಕುರಿತು ಅವರು ಪೌರಸಭೆಯಲ್ಲಿ ಸ್ಥಿತಿಯಲ್ಲಿ ಮುಷ್ಕರ ಹೊಡೆದಿದ್ದಾರೆ.
ಈ ಸಂದರ್ಭದಲ್ಲಿ ಕಿರಣ್ ವಾಸುದೇವ್, ವಿಶ್ವನಾಥ್ ಜಾದವ್, ಬಹದ್ದೂರೆ ಸರ್, ಚಂದ್ರಕಾಂತ್ ಗುಜ್ಜನ್ನವರ್ ಖೋತ ಮೇಡಂ. ಇನ್ನು ಇತರ ಎಲ್ಲ ಪೌರಕಾರ್ಮಿಕ ಕಾರ್ಮಿಕರು ಉಪಸ್ಥಿತರಿದ್ದರು.
ವರದಿ :ರಾಜು ಮುಂಡೆ




