ನಿಡಗುಂದಿ :ಬುಧವಾರ ಅಮಾವಾಸ್ಯೆ ಆಲಮಟ್ಟಿಯಲ್ಲಿ ವಿಚಿತ್ರ ಆಡಿನ ಮರಿ ಜನನವಾಗಿದೆ, ಮುರೆಪ್ಪ.ಭೀ.ಜಲ್ಲಿ ಇವರ ಮನೆಯಲ್ಲಿ ಸಾಕಿದ ಆಡು ವಿಚಿತ್ರ ಮರಿಗಳಿಗೆ ಜನ್ಮ ನೀಡಿದೆ.
ಆಡು ಒಟ್ಟು ಐದು ಮರಿಗಳಿಗೆ ಜನ್ಮ ನೀಡಿದ್ದು, ಅದರಲ್ಲಿ ಎರಡು ಜೀವಂತವಾಗಿದ್ದು, ಅವುಗಳಲ್ಲಿ ಮೂರು ಮರಿಗಳು ಜೀವಂತವಿಲ್ಲ.
ಜನಿಸಿದ ಐದು ಮರಿಗಳಲ್ಲಿ ಒಂದು ಮರಿಗೆ ಎರಡು ಶರೀರ ಒಂದೇ ತಲೆ, ಎಂಟು ಕಾಲು, ನಾಲ್ಕು ಕಿವಿ, ಎರಡು ಕಣ್ಣುಗಳಿವೆ.ಬಾಯಿ ಇಲ್ಲ, ಬಾಯಿ ಇರಬೇಕಾದ ಸ್ಥಳದಲ್ಲಿ ಎರಡು ಕಣ್ಣುಗಳಿವೆ, ಈ ರೀತಿಯಾಗಿ ವಿಚಿತ್ರ ಮರಿಗೆ ಜನ್ಮ ನೀಡಿದೆ.ಈ ಮರಿಗಳನ್ನ ಗಮನಿಸಿದ ಸಾರ್ವಜನಿಕರು ಸಾಕಿದ ಮಾಲಕರು ಹಣೆಗೆ ಕೈ ಹಚ್ಚಿಕೊಳ್ಳುವಂತಾಗಿದೆ.
ವಿಚಿತ್ರವಾಗಿ ಕಾಣುವ ಆಡಿನ ಮರಿಗಳನ್ನ ನೋಡಿ ಗಾಬರಿಯಾಗಿದ್ದಾರೆ, ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ಖುಷಿ ಒಂದು ಕಡೆಯಾದರೆ, ವಿಚಿತ್ರವಾಗಿ ಕಾಣುವ ಆಡಿನ ಮರಿಯನ್ನು ಕಂಡು ಗಾಬರಿಯಾಗಿದ್ದು ಮತ್ತೊಂದು ಕಡೆ.
ವರದಿ: ಅಲಿ ಮಕಾನದಾರ




