ಸಿರುಗುಪ್ಪ : ನಗರದ ನಗರ ಸಭೆ ಕಚೇರಿ ಮುಂಭಾಗದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರನೌಕರರಿಂದ ಮುಷ್ಕರ ನಡೆಸಲಾಯಿತು.
ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಸಿರುಗುಪ್ಪ ಶಾಖೆಯ ಅಧ್ಯಕ್ಷ ಕೆ.ವೆಂಕೋಬ ಅವರು ಮಾತನಾಡಿ ರಾಜ್ಯದ್ಯಂತ ನಮ್ಮ ನಮ್ಮ ಹೋರಾಟ ನಡೆಯುತ್ತಿದ್ದು, ಬೇಡಿಕೆಗಳಾದ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು.
ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳು ನಮಗೂ ಸಿಗಬೇಕಾಗಿದೆ. ಎಲ್ಲಾ ಬೇಡಿಕೆಗಳು ಈಡೇರುವವರೆಗೂ ಅನಿರ್ದಿಷ್ಟ ಅವಧಿ ಮುಷ್ಕರ ನಡೆಸಲಾಗುತ್ತಿದೆಂದು ತಿಳಿಸಿದರು.

ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಸೇನ್ ಭಾಷಾ ಮಾತನಾಡಿ ಸೌಲಭ್ಯಗಳ ಈಡೇರಿಕೆಗಾಗಿ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿ ಸಮಸ್ಯೆಗಳ ಇತ್ಯರ್ಥಪಡಿಸಬೇಕು.
ಅಲ್ಲಿಯವರೆಗೂ ಕಸ ಸಂಗ್ರಹ ವಿಲೇವಾರಿ ಸ್ವಚ್ಛತೆ ಒಳಚಂಡಿನಿವಹಣೆ ಹಾಗೂ ಕಚೇರಿ ಕೆಲಸಕ್ಕೆ ಗೈರು ಹಾಜರಾಗುವುದಾಗಿ ತಿಳಿಸಿದರು.
ಇದೇ ವೇಳೆ ಶಾಖಾ ಉಪಾಧ್ಯಕ್ಷ ಎಚ್ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಿ. ಪಂಪಾಪತಿ, ಎಇಇ ಗಂಗಾಧರ ಗೌಡ, ಸಹಾಯಕ ಅಭಿಯಂತರ ರಮೇಶ್ ಹಾಗೂ ಪೌರಕಾರ್ಮಿಕರಿದ್ದರು.
ವರದಿ : ಶ್ರೀನಿವಾಸ ನಾಯ್ಕ




