Ad imageAd image

ಎಲ್ಲರೂ ಕನ್ನಡ ಕಲಿಯೋಣ ಪುಸ್ತಕ ಬಿಡುಗಡೆ

Bharath Vaibhav
ಎಲ್ಲರೂ ಕನ್ನಡ ಕಲಿಯೋಣ ಪುಸ್ತಕ ಬಿಡುಗಡೆ
WhatsApp Group Join Now
Telegram Group Join Now

ತುಮಕೂರು:  ಜಿಲ್ಲೆಯ ಪಾವಗಡ ತಾಲ್ಲೂಕಿನ ಮೇ 28, ಪಾವಗಡ ಪಟ್ಟಣದಲ್ಲಿರುವ ಗುರುಭವನದಲ್ಲಿ ನರೇಂದ್ರ ಹೆಚ್‍. ರವರು ಬರೆದಿರುವ ಧನ್ಯ ಪ್ರಕಾಶನ‌ ಅವರ ಸರಳೀಕೃತ ಎಲ್ಲರೂ ಕನ್ನಡ ಕಲಿಯೋಣ ಮತ್ತು Simplified Let’s All Learn English ಎಂಬ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ಲೇಖಕರಾದ ನರೇಂದ್ರ ಹೆಚ್. ಅವರು ಮಾತನಾಡಿ ಈ ಸರಳೀಕೃತ ಎಲ್ಲರೂ ಕನ್ನಡ ಕಲಿಯೋಣ ಪುಸ್ತಕವು ಎಲ್ಲಾ ವಿದ್ಯಾರ್ಥಿಗಳಿಗೆ, ಕನ್ನಡ ಕಲಿಯ ಬಯಸುವ ಹೊಸಬರಿಗೆ ಒಂದು ಸ್ನೇಹಪರ ಮಾರ್ಗದರ್ಶನವಾಗಿದೆ, ಈ ಪುಸ್ತಕವು ಎಂಟು ಹಂತಗಳನ್ನು ಒಳಗೊಂಡಿದ್ದು ಸಾವಿರಕ್ಕಿಂತ ಹೆಚ್ಚು ವಿಶೇಷ ಪದಗಳನ್ನು, ವಾಕ್ಯಗಳನ್ನು, ಪಾಠ ಹಾಗೂ ಪದ್ಯಗಳನ್ನು ಹಲವಾರು ಉದಾಹರಣೆ ಸಹಿತ ವಿವರಣೆಗಳಿಂದ ಕೂಡಿದೆ ಹಾಗೂ ಎರಡನೇ ಪುಸ್ತಕವಾದ Simplified Let’s All Learn English ಪುಸ್ತಕವು ಇಂಗ್ಲಿಷ್ – ಕನ್ನಡ ದ್ವಿಬಾಷಾ ಪುಸ್ತಕವಾಗಿದ್ದು ವಿವಿಧ ಪುಸ್ತಕಗಳಲ್ಲಿ ಅನೇಕಾನೇಕ ಬಾರಿ ಪುನರಾವರ್ತನೆ ಆಗುವ ಉಪಯುಕ್ತ ಪದಗಳು, ಸರಳ ವಾಕ್ಯಗಳು, ಅನೇಕ ಸರಳ ಹಾಗೂ ಸ್ಪಷ್ಟವಾದ ವಿವರಣೆಗಳನ್ನು ಒಳಗೊಂಡಿದೆ ಈ ಎರಡು ಪುಸ್ತಕಗಳ ಕ್ರಮಬದ್ಧವಾದ ಅಧ್ಯಯನದಿಂದ ಎಲ್ಲರೂ ಕನ್ನಡ ಮತ್ತು ಇಂಗ್ಲಿಷನ್ನು ಸ್ಪಷ್ಟವಾಗಿ ಓದುವುದನ್ನು ಸರಳವಾಗಿ ಕಲಿಯಬಹುದು ಎಂದು ಲೇಖಕರು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಹನುಮಂತರಾಯಪ್ಪ ವಹಿಸಿದ್ದರು, ಬಾಪೂಜಿ ಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ವಿ.ಎನ್.ಜಿ , ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಬಸವಲಿಂಗಪ್ಪನವರು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶಿವಾನಂದಯ್ಯ , ನಿಕಟ ಪೂರ್ವ ಪ್ರಾಂಶುಪಾಲರಾದ ಮಾರಪ್ಪ ರಾಜ್ಯಶಾಸ್ತ್ರ ಉಪನ್ಯಾಸಕರಾದ ನಾಗೇಂದ್ರಪ್ಪ , ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣಪ್ಪ , ಡಿ ಜೆ ಎಸ್ ನ ನಾರಾಯಣಪ್ಪ ವಾಣಿ ಮುತಾದ ಅತಿಥಿಗಳು ಪುಸ್ತಕಗಳು ಕುರಿತು ಒಳ್ಳೆಯ ಅಭಿಪ್ರಾಯಗಳನ್ನು ವ್ಯಕಪಡಿಸಿದರು.

ಈ ಕಾರ್ಯಕ್ರಮದಲ್ಲಿ ಧನ್ಯಪ್ರಕಾಶನದವರ ಸುನಂದಾ ನರೇಂದ್ರ, ವಿದ್ಯಾರ್ಥಿನಿಯರಾದ ಹರ್ಷಿತ.ವಿ, ಚೈತ್ರ.ಜಿ, ನವ್ಯ, ಭಾವನ, ಸೌಜನ್ಯ, ಇನ್ನೂ 150 ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ: ಶಿವಾನಂದ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!